"ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಲೇಖನ " ತುಳುನಾಡು ನ್ಯೂಸ್ ಫೇಸ್ಬುಕ್ ಖಾತೆ ವಿರುದ್ಧ ಠಾಣೆ ಮೆಟ್ಟಿಲು ಏರಿದ ಕೃಷ್ಣಪ್ಪ
ಮಂಗಳೂರು :ತುಳುನಾಡು ನ್ಯೂಸ್ ಎಂಬ ಫೇಸ್ಬುಕ್ ಖಾತೆಯಿಂದ ಪ್ರಕಟಿಸಿದ ಬರಹದ ವಿರುದ್ಧ ಬಿಜೆಪಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ .
ಇತ್ತೀಚೆಗೆ ಕಲ್ಲಡ್ಕದಲ್ಲಿ ನಡೆದ ಕೋಮು ಸಂಘರ್ಷಕ್ಕೆ ಸಂಬಂಧ ಪಟ್ಟಂತೆ ಸಂಘ ಪರಿವಾರದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪತ್ರಿಕಾ ಗೋಷ್ಠಿ ನಡೆಸಿದ್ದರು ನಂತರದ ಬೆಳವಣಿಗೆಯಲ್ಲಿ ಪ್ರಭಾಕರ್ ಭಟ್ ಅವರನ್ನು ವಿರೋಧಿಸುವ ಇನ್ನೊಂದು ಬಣ ತುಳುನಾಡು ನ್ಯೂಸ್ ಫೇಸ್ಬುಕ್ ಖಾತೆಯಲ್ಲಿ ಕೃಷ್ಣಪ್ಪ ಪೂಜಾರಿ ಹೆಸರಿನಲ್ಲಿ ಪ್ರಭಾಕರ್ ಭಟ್ ಅವರ ವಿರುದ್ಧ ಕಟುವಾಗಿ ಟೀಕೆಗೈದು ಬರೆಯಲಾಗಿತ್ತು .ಈ ಲೇಖನದ ವಿರುದ್ಧ ಹಲವಾರು ಬಲಪಂಥೀಯರು ಆಕ್ರೋಶ ಕೂಡ ವ್ಯಕ್ತ ಪಡಿಸಿದ್ದರು ಮತ್ತು ಈ ಬಗ್ಗೆ ಕೃಷ್ಣಪ್ಪ ಪೂಜಾರಿ ತುಳುನಾಡು ನ್ಯೂಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ಎಂದು ತಿಳಿದು ಬಂದಿದೆ .ಈ ಎಲ್ಲದರ ಹಿಂದೆ ನರೇಶ್ ಶೆಣೈ ಕೈವಾಡ ಇದೆ ಎಂದು ಸಂಘ ಪರಿವರಾದ ಹಿರಿಯರೊಬ್ಬರು ಹೇಳಿದ್ದಾರೆ .
No comments