Breaking News

ಗಡ್ಡ ಬಿಟ್ಟ ಮುಸ್ಲಿಂ ಪತಿಗೆ ಕುದಿಯುವ ನೀರು ಎರುಚಿದ ಪತ್ನಿ



ಅಲಿಗಢ: ಕುರುಚಲು ಗಡ್ಡದ ವಿಚಾರವಾಗಿ ಮುಸ್ಲಿಂ ದಂಪತಿ ಜಗಳ ತಾರಕಕ್ಕೇರಿ ಕೋಪಗೊಂಡ ಪತ್ನಿ
  ನಗ್ಮಾ ಬಿಸಿ ನೀರು ಎರಚಿದ್ದಾಳೆ.ಪತಿ ಸಲ್ಮಾನ್‌ ಖಾನ್‌(32) ಸುಟ್ಟ ಗಾಯದಿಂದ ನರಳುತ್ತಿದ್ದಾನೆ.


ಧಾರ್ಮಿಕ ಕಾರಣಗಳಿಂದ ಗಡ್ಡ ತೆಗೆಯಲು ಸಲ್ಮಾನ್‌ ನಿರಾಕರಿಸುತ್ತಿದ್ದ. ಇದೇ ವಿಚಾರವಾಗಿ ಅವರಿಬ್ಬರು ಸದಾ ಕಿತ್ತಾಡುತ್ತಿದ್ದರು. ತಾಳ್ಮೆ ಕಳದುಕೊಂಡ ನಗ್ಮಾ ಗಂಡನ ಮೇಲೆ ಕುದಿಯುವ ನೀರು ಎರಚಿದ್ದಾಳೆ. 'ಧಾರ್ಮಿಕ ಮನೋಭಾವದವನಾದ ನನಗೆ ಮುಕ್ತ ಮನಸ್ಸಿನ ಆಕೆಯ ಲೈಫ್‌ಸ್ಟೈಲ್‌ ಸಹ್ಯವಾಗಿರಲಿಲ್ಲ,'ಎಂದು ಸಲ್ಮಾನ್‌ ಹೇಳಿದ್ದಾನೆ.
6 ತಿಂಗಳ ಹಿಂದಷ್ಟೇ, ಮದುವೆಯಾಗಿದ್ದ ದಂಪತಿ ನಡುವೆ ಉಡುಗೆ ತೊಡುಗೆ, ಗಡ್ಡದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕುರ್ತಾ ಪೈಜಾಮಾ ಬಿಟ್ಟು ಪ್ಯಾಂಟ್ ಶರ್ಟ್‌ ಧರಿಸಬೇಕು, ಗಡ್ಡ ತೆಗೆಯಬೇಕು ಎಂದು ನಗ್ಮಾ ಪಟ್ಟು ಹಿಡಿದಿದ್ದಳು. ಆದರೆ, ಸಲ್ಮಾನ್‌ ಅದಕ್ಕೆ ಒಪ್ಪಿರಲಿಲ್ಲ.
ಮೇ 31ರಂದು ವ್ಯಾಪಾರ ಮುಗಿಸಿ ಸಲ್ಮಾನ್‌ ಮನೆಗೆ ಬಂದಾಗ ನೀರು ಕುದಿಸುತ್ತಿದ್ದ ನಗ್ಮಾ ಬಳಿ ಪ್ರಶ್ನಿಸಿದಾಗ, ಮೊಟ್ಟೆ ಬೇಯಿಸಲು ನೀರು ಕುದಿಸುತ್ತಿರುವುದಾಗಿ ಹೇಳಿದ್ದಳು. ನಂತರ ಅದನ್ನು ಸಲ್ಮಾನ್‌ ಮೇಲೆ ಎಸೆದಿದ್ದಾಳೆ.

'ನೋವು ಉರಿಯಿಂದ ಬೊಬ್ಬೆ ಇಟ್ಟಾಗ ಅಕ್ಕಪಕ್ಕದವರು ಸೇರಿ ಜೆಎನ್‌ ಮೆಡಿಕಲ್‌ ಕಾಲೇಜಿಗೆ ದಾಖಲಿಸಿದ್ದಾರೆ.ಸಲ್ಮಾನ್ ಮುಖ ಹಾಗೂ ತೋಳಿನ ಶೇ. 20 ಭಾಗ ಸುಟ್ಟಿದೆ. ಪತ್ನಿ ವಿರುದ್ಧ ಹಣ್ಣು ವ್ಯಾಪಾರಿ ಸಲ್ಮಾನ್‌, ಕೊಲೆ ಯತ್ನದ ದೂರು ದಾಖಲಿಸಿದ್ದಾನೆ.

Toi

No comments