25ವರ್ಷದ ಯುವತಿಯನ್ನು ಗರ್ಭವತಿ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತ ಬಾಲಕ
ಬೆಂಗಳೂರು: ಪಕ್ಕದ ಮನೆಯ ೧೭ ವರ್ಷದ ಹುಡುಗನನ್ನು ಮರುಳು ಮಾಡಿ ಲೈಂಗಿಕ ಸಂಪರ್ಕ ಹೊಂದಿದ ೨೫ ವರ್ಷದ ಯುವತಿಯೊಬ್ಬಳು ಈಗ ತಾನು ಗರ್ಭಿಣಿ ಎಂದು ಹೇಳಿ ಮದುವೆಯಾಗುವಂತೆ ಪೀಡಿಸಲಾರಂಭಿಸಿದಾಗ ಹುಡುಗ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಒಂದು ಇಡೀ ಬಾಟಲ್ ಕ್ರಿಮಿನಾಶಕ ಹಾಗೂ ಕೈಗೆ ಸಿಕ್ಕ ಮಾತ್ರೆಗಳನ್ನು ನುಂಗಿದ ಹುಡುಗ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಕೆಲಸ ಮಾಡಿದ್ದಾನೆ.
ತಂದೆ ತಾಯಿಗಳು ಮನೆಗೆ ಹಿಂದಿರುಗಿದಾಗ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದ ಹುಡುಗ ಹಾಗೂ ಪಕ್ಕದಲ್ಲೇ ಇದ್ದ ಕ್ರಿಮಿನಾಶಕದ ಬಾಟಲಿ ನೋಡಿ ಹೌಹಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಯನಗರದಲ್ಲಿ ಮನೆಯೊಂದರಲ್ಲಿ ವಾಸವಿರುವ ಈ ಹುಡುಗ ಪ್ರಥಮ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದಾನೆ.
’ನನ್ನ ಮಗ ಆಘಾತದಿಂದ ಇನ್ನೂ ಹೊರಬಂದಿಲ್ಲ. ಹುಡುಗಿ ಕಡೆಯವರು ಹುಡುಗನ ಜತೆ ಮದುವೆ ಮಾಡುವಂತೆ ಬೆದರಿಸುತ್ತಿದ್ದಾರೆ. ನಾವು ಒಪ್ಪದಿದ್ದಾಗ ಹುಡುಗ-ಹುಡುಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋಗಳು ನಮ್ಮ ಬಳಿಯಿದೆ ಎಂದು ಹೆದರಿಸುತ್ತಿದ್ದಾರೆ’.
ನಮ್ಮನ್ನು ಮನೆಗೆ ಕರೆಸಿಕೊಂಡು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧-೩೦ರ ವರೆಗೆ ನಮಗೆ ಮಾನಸಿಕ ಹಿಂಸೆ ನೀಡಿದ್ದಲ್ಲದೆ, ನಮಗೆ ಮೂರು ಅವಕಾಶ ನೀಡಿದ್ದಾರೆ.
ಮೊದಲನೆಯದು ಕೂಡಲೇ ಮದುವೆ ಮಾಡಿಕೊಡಬೇಕು, ಎರಡನೆಯದು ಮಗುವನ್ನು ಸಾಕಿಕೊಳ್ಳಬೇಕು, ಮೂರನೆಯದು ನಿಮ್ಮ ಹುಡುಗ ಪ್ರಾಪ್ತ ವಯಸ್ಕನಾಗುತ್ತಿದ್ದಂತೆ ಮದುವೆ ಮಾಡಿಕೊಡುತ್ತೇವೆ ಎಂದು ಲಿಖಿತ ಭರವಸೆ ನೀಡಬೇಕು ಎಂಬುದಾಗಿದೆ.
ಈ ಹುಡುಗಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ದುರದೃಷ್ಟವಶಾತ್ ಅವಳ ಕುಟುಂಬದವರೂ ಅವಳನ್ನೇ ಬೆಂಬಲಿಸುತ್ತಿದ್ದಾರೆ.
ಈಗ ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹುಡುಗನ ತಂದೆ ತಾಯಿಗಳು ಹೇಳಿದ್ದಾರೆ.
ಆಗ್ನೇಯ ವಿಭಾಗದ ಪೊಲೀಸರು ಯುವತಿ ಹಾಗೂ ಅವಳ ಇಬ್ಬರು ಭಾವಮೈದುನರ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ಹಾಗೂ ಕ್ರಿಮಿನಲ್ ಸ್ವರೂಪದ ಬೆದರಿಕೆ ಆರೋಪಗಳಡಿ ಮೊಕದ್ದಮೆ ದಾಖಲಿಸಿದ್ದಾರೆ.
ಹುಡುಗನ ಹೇಳಿಕೆಯನ್ನು ಪೊಲೀಸರು ಇನ್ನೂ ದಾಖಲಿಸಿಲ್ಲ ಹಾಗೂ ಹುಡುಗಿ ಮನೆಯವರನ್ನು ಈವರೆಗೆ ಬಂಧಿಸಿಲ್ಲ ಎಂದು ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
No comments