Breaking News

ಮೊಬೈಲ್ ಕರೆ ಮಾಡಲು ಮರ ಹತ್ತಿದ ಬಿಜೆಪಿ ಸಚಿವ



ಬಿಕಾನೇರ್: ರಾಜಸ್ತಾನದ  ದೋಲಿಯಾ ಗ್ರಾಮಕ್ಕೆ ಭೇಟಿ ನೀಡಿದ್ದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮೊಬೈಲ್‍ನಲ್ಲಿ ಮಾತನಾಡಲು ಮರ ಹತ್ತಿದ್ದಾರೆ.
ಭಾನುವಾರ ಮೇಘವಾಲ್ ಅವರು ಈ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಅಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ. ಆದರೆ ಅಧಿಕಾರಿಗಳು ಇದಕ್ಕೆ ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದರು. ಜನರ ಸಮಸ್ಯೆಗಳನ್ನು ಆಲಿಸಿದ ಮೇಘವಾಲ್ ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದಾಗ ಆ ಪ್ರದೇಶದಲ್ಲಿ ನೆಟ್‍ವರ್ಕ್ ಸಿಗುತಿರಲಿಲ್ಲ.

ಪ್ರತಿದಿನವೂ ನಾವು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮೊಬೈಲ್ ನೆಟ್‍ವರ್ಕ್ ಸಿಗಬೇಕಾದರೆ ಮರ ಹತ್ತಬೇಕು ಎಂದು ಸ್ಥಳೀಯರು ಹೇಳಿದಾಗ ಸಚಿವರಿಗೆ ಮರ ಹತ್ತದೆ ಬೇರೆ ದಾರಿ ಇರಲಿಲ್ಲ. ಅಲ್ಲಿನ ಗ್ರಾಮಸ್ಥರು ಏಣಿ ತಂದು ಕೊಟ್ಟು, ಏಣಿ ಮೂಲಕ ಮರ ಸಚಿವರು ಅಧಿಕಾರಿಗಳಿಗೆ ಫೋನ್ ಮಾಡಿ ಗ್ರಾಮಸ್ಥರ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದಾರೆ. ಮತ್ತು ಪ್ರಸ್ತುತ ಗ್ರಾಮದಲ್ಲಿ ಬಿಎಸ್‍ಎನ್ಎಲ್ ಮತ್ತು ಇತರ ನೆಟ್‍ವರ್ಕ್ ಟವರ್‍‍ಗಳನ್ನು ಸ್ಥಾಪಿಸಲು ₹13 ಲಕ್ಷ ಘೋಷಿಸಿದ್ದಾರೆ.

No comments