ರೋಸ್ ವಾಟರ್ ಬಳಸಿ ಸೌಂದರ್ಯವನ್ನು ಕಾಪಾಡಿ
ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಯಾಕೆಂದರೆ ಕಲುಷಿತ ವಾತಾವರಣ ಹಾಗೂ ತಿನ್ನುವಂತಹ ಅನಾರೋಗ್ಯಕರ ಆಹಾರದಿಂದಾಗಿ ಸೌಂದರ್ಯವು ಕೆಡುವುದು. ಅದರಲ್ಲೂ ಕಲುಷಿತ ವಾತಾವರಣದಿಂದಾಗಿ ತ್ವಚೆಯನ್ನು ಕಾಪಾಡಿಕೊಳ್ಳುವುದು ಕಷ್ಟ. ಗುಲಾಬಿಯಂತಹ ಮೃದು ತ್ವಚೆಗೆ ರೋಸ್ ವಾಟರ್ ಬಳಸಿ ನೋಡಿ.
ರೋಸ್ ವಾಟರ್ ನಲ್ಲಿರುವ ಉರಿಯೂತ ಶಮನಕಾರಿ ಗುಣಗಳಿಂದಾಗಿ ಕಣ್ಣಿನ ಸುತ್ತಲು ಇರುವಂತಹ ನಿಸ್ತೇಜತೆಯು ನಿವಾರಣೆಯಾಗುವುದು. ಒಂದು ಬಾಟಲಿ ರೋಸ್ ವಾಟರ್ ನ್ನು ಫ್ರಿಡ್ಜ್ ನಲ್ಲಿಟ್ಟು ಅದರಲ್ಲಿ ಎರಡು ಹತ್ತಿ ಉಂಡೆಯನ್ನು ಮುಳುಗಿಸಿಡಬೇಕು. ಈ ಹತ್ತಿಯ ಉಂಡೆಯನ್ನು ಕಣ್ಣಿನ ಮೇಲಿಟ್ಟರೆ ಕಣ್ಣಿಗೆ ಆರಾಮ ಸಿಗುವುದು. ಇದು ಕಣ್ಣಿನ ಸುತ್ತಲಿನ ಪ್ರದೇಶಕ್ಕೆ ಹಿತವನ್ನು ಒದಗಿಸುವುದು.
ಸ್ನಾನ ಮಾಡುವ ನೀರಿಗೆ ಒಂದರಿಂದ ಎರಡು ಕಪ್ ರೋಸ್ ವಾಟರ್ ಹಾಕಿಕೊಂಡು ಸ್ನಾನ ಮಾಡಿದರೆ ತ್ವಚೆಗೆ ಪುನರ್ಚೇತನ ನೀಡಿದಂತಾಗುತ್ತದೆ. ರೋಸ್ ವಾಟರ್‌ನಲ್ಲಿ ತ್ವಚೆಗೆ ಹಿತ ನೀಡುವಂತಹ ಗುಣವಿದೆ. ಇದರಿಂದ ತ್ವಚೆಯು ಮತ್ತಷ್ಟು ಸುವಾಸನೆಯುಕ್ತವಾಗುವುದು.
ಹತ್ತಿಯ ಉಂಡೆಗೆ ರೋಸ್ ವಾಟರ್ ನ್ನು ಹಾಕಿಕೊಂಡು ಮೇಕಪ್ ನ್ನು ನೈಸರ್ಗಿಕವಾಗಿ ತೆಗೆಯಬಹುದು. ಹತ್ತಿಯ ಉಂಡೆಯನ್ನು ರೋಸ್ ವಾಟರ್ ನಲ್ಲಿ ಮುಳುಗಿಸಿಕೊಂಡು ಅದರ ಮೇಲೆ ಒಂದೆರಡು ಹನಿ ತೆಂಗಿನ ಎಣ್ಣೆಯನ್ನು ಹಾಕಿ ಮೇಕಪ್ ನ್ನು ಸುಲಭವಾಗಿ ತೆಗೆಯಬಹುದು. ರೋಸ್ ವಾಟರ್ ನ್ನು ಬಳಸಿಕೊಂಡು ಮೇಕಪ್ ನ್ನು ಹೆಚ್ಚಿನ ಶ್ರಮವಿಲ್ಲದೆ ತೆಗೆಯಬಹುದು. ಆಲ್ಕೋಹಾಲ್ ಯುಕ್ತ ಲೋಷನ್ ಮತ್ತು ಟೋನರ್ ನ ಅಲರ್ಜಿ ಹೊಂದಿರುವವರು ರೋಸ್ ವಾಟರ್ ಬಳಸಬಹುದು.
ರೋಸ್ ವಾಟರ್ ನ್ನು ತ್ವಚೆಯ ಟೋನರ್ ಆಗಿ ಬಳಸಬಹುದು. ಇದು ಉಬ್ಬಿಕೊಂಡಿರುವ ಮೊಡವೆಗಳನ್ನು ಸಣ್ಣದು ಮಾಡಿ ತುಂಬಿರುವಂತಹ ರಂಧ್ರಗಳನ್ನು ತೆರೆಯುವುದು. ರೋಸ್ ವಾಟರ್ ನ್ನು ಟೋನರ್ ಆಗಿ ಬಳಸುವುದರಿಂದ ರಂಧ್ರಗಳು ಬಿಗಿಗೊಂಡು ಚರ್ಮದ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗುವುದು. ರೋಸ್ ವಾಟರ್ ನ್ನು ಮುಖಕ್ಕೆ ಬಳಸುವುದರಿಂದ ಮುಖದ ಕಾಂತಿಯು ಉತ್ತಮವಾಗುವುದು.
ಕಾಲಿನ ಕೂದಲನ್ನು ಕ್ಷೌರ ಮಾಡಿದಾಗ ಅಥವಾ ವ್ಯಾಕ್ಸ್ ಮಾಡಿದ ಬಳಿಕ ಚರ್ಮವು ಕಿರಿಕಿರಿ, ಉರಿಯನ್ನು ಉಂಟು ಮಾಡುತ್ತದೆ. ಕೂದಲು ತೆಗೆದ ಬಳಿಕ ರೋಸ್ ವಾಟರ್ ನ್ನು ಶೇವ್ ಬಳಿಕದ ಲೋಷನ್ ಆಗಿ ಬಳಸಿಕೊಂಡರೆ ಇದು ಕಾಲಿನ ಚರ್ಮಕ್ಕೆ ಆರಾಮ ನೀಡುವುದು ಮಾತ್ರವಲ್ಲದೆ ಚರ್ಮಕ್ಕೆ ತೇವಾಂಶವನ್ನು ನೀಡುವುದು. ಕೂದಲು ತೆಗೆದ ಕೂಡಲೇ ರೋಸ್ ವಾಟರ್ ಬಳಸಿದರೆ ಕಾಲಿನ ಚರ್ಮದಲ್ಲಿ ದಿನವಿಡೀ ತೇವಾಂಶವನ್ನು ಕಾಪಾಡಿಕೊಳ್ಳುವುದು.
ನಿಮ್ಮ ಚರ್ಮವು ಒಣ ಹಾಗೂ ನಿಸ್ತೇಜವಾಗಿದ್ದರೆ ಪ್ರತೀದಿನ ರೋಸ್ ವಾಟರ್ ಬಳಸಿದರೆ ಚರ್ಮವು ಸುಲಭವಾಗಿ ಪುನರ್ಚೇತಗೊಳ್ಳುವುದು. ಚರ್ಮಕ್ಕೆ ರೋಸ್ ವಾಟರ್ ನ್ನು ಬಳಸಿದಾಗ ಚರ್ಮವು ಮೃದುವಾಗುವುದನ್ನು ನೀವು ಕಾಣಬಹುದು. ರೋಸ್ ವಾಟರ್ ಬಳಸಿದರೆ ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಬಹುದು. ಇದರಿಂದ ನಯ ಹಾಗೂ ಮೊಡವೆರಹಿತ ಚರ್ಮವನ್ನು ಪಡೆಬಹುದು.
ಮುಖದಲ್ಲಿ ತಾಜಾತನ ಬರಬೇಕೆಂದರೆ ನೀವು ರೋಸ್ ವಾಟರ್ ಬಳಸಬೇಕು. ಸ್ವಲ್ಪ ರೋಸ್ ವಾಟರ್ ನ್ನು ಮುಖದ ಮೇಲೆ ಸಿಂಪಡಿಸಿದರೆ ಮುಖದಲ್ಲಿ ತಾಜಾತನವು ಮರಳುವುದು. ರೋಸ್ ವಾಟರ್ ಮುಖದ ತಾಜಾತನವನ್ನು ಕಾಪಾಡಿಕೊಂಡು ದಿನವಿಡಿ ಚರ್ಮಕ್ಕೆ ತೇವಾಂಶವನ್ನು ಒದಗಿಸಿಕೊಡುವುದು. ಮುಖದ ತಾಜಾತನಕ್ಕಾಗಿ ನೀವು ತಂಪಾದ ರೋಸ್ ವಾಟರ್ ಬಳಸಿದರೆ ತುಂಬಾ ಒಳ್ಳೆಯದು.
No comments