ಮಗನಿಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್
ಇಂಗ್ಲೆಂಡಿನ ಕೇಥಿ ಲೆಟ್ಟೆ ಎಂಬಾಕೆ ತನ್ನ ಮಗ ಜೂಲಿಯಸ್ ಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ಒಬ್ಬಳನ್ನು ನೇಮಿಸಿದ್ದಾಳೆ. ಲಂಡನ್ ನಿವಾಸಿಯಾಗಿರೋ ಕೇಥಿಗೆ ತನ್ನ ಮಗ ಒಂದು ದಿನ ‘ಅಮ್ಮ ನನಗೆ ಯಾರು ಗರ್ಲ್ ಫ್ರೆಂಡ್ ಇಲ್ಲ, ನಾನು ಜೀವನ ಪೂರ್ತಿಯಾಗಿ ಒಂಟಿಯಾಗಿರಬೇಕಾ ಎಂದು ಕೇಳಿದ್ದಾನೆ. ಮಗನ ನೋವುಭರಿತ ಮಾತುಗಳನ್ನು ಕೇಳಿದ ತಾಯಿ ಕೂಡಲೇ ಸೆಕ್ಸ್ ವರ್ಕ್‌ರೊಬ್ಬರನ್ನು ಬುಕ್ ಮಾಡಿ ಮಗನನ್ನು ಖುಷಿ ಪಡಿಸಿದ್ದಾಳೆ.
ಮಂದಬುದ್ಧಿಯ ಮಗ: ಜೂಲಿಯಸ್ ಹುಟ್ಟಿದಾಗಿನಿಂದಲೂ ಮಂದಬುದ್ದಿಯವನಾಗಿ ಬೆಳೆದಿದ್ದ. ಜೂಲಿಯಸ್‌ಗೆ ತನ್ನ ಸುತ್ತಮುತ್ತ ನಡೆಯುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಷ್ಟು ಸಹ ಜ್ಞಾನವಿರಲಿಲ್ಲ. ಜೂಲಿಯಸ್ ಶಾಲೆಗೆ ಹೋಗುವಾಗ ಒಂದು ದಿನ ತಾಯಿ ಅವನ ಬೆನ್ನ ಮೇಲೆ ಬರಹವುಳ್ಳ ಪೋಸ್ಟರ್ ಅಂಟಿಸಿ ಕಳುಹಿಸಿದ್ದರು. ಆ ಪೋಸ್ಟರ್‍ನಲ್ಲಿ ‘ನಾನು ಮಂದಬುದ್ಧಿಯವ ನನಗೆ ಎಲ್ರೂ ನನ್ನ ಎದೆ ಮೇಲೆ ಒದೆಯಿರಿ’ ಎಂದು ಬರಯಲಾಗಿತ್ತು. ಆದ್ರೆ ಜೂಲಿಯಸ್‌ಗೆ ಮಾತ್ರ ‘ಮಂದಬುದ್ಧಿ’ ಪದದ ಅರ್ಥವೇ ಗೊತ್ತಿರಲಿಲ್ಲ.
ಜೂಲಿಯಸ್ ೨೦ ವರ್ಷದವನಾದ ಆತನ ಸಹಪಾಠಿಗಳೆಲ್ಲ ಓದುವುದರಲ್ಲಿ, ಆಡುವುದರಲ್ಲಿ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದರೂ, ಜೂಲಿಯಸ್ ಮಾತ್ರ ಎಂದಿನಂತೆ ಹಿಂದುಳಿಯುತ್ತಿದ್ದ, ಜೂಲಿಯಸ್‌ಗೆ ಕಾಲೇಜಿನಲ್ಲಿ ಒಂದು ದಿನ ಆತನ ಗೆಳತಿಯರು ನೀನು ನಾಮರ್ದ ಎಂದು ಕರೆದು ಚುಡಾಯಿಸಿದ್ದಾರೆ. ಸ್ಥಳದಲ್ಲಿದ್ದ ಆತನ ಇನ್ನುಳಿದ ಸ್ನೇಹಿತರು ಸಹ ಅವನನ್ನು ಅವಮಾನಿಸಿ ಚುಡಾಯಿಸಿದ್ದಾರೆ.
ಕಾಲೇಜ್‌ನಲ್ಲಿ ನಡೆದ ಘಟನೆ ಬಳಿಕ ಮನೆಗೆ ಬಂದ ಜೂಲಿಯಸ್ ತಾಯಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಅಮ್ಮಾ ನನಗೆ ಜೀವನದಲ್ಲಿ ಗರ್ಲ್ ಫ್ರೆಂಡ್ ಸಿಗಲ್ವಾ? ನಾನೇಕೆ ಹೀಗಿದ್ದೇನೆ? ನಾನೇನು ಮಾಡ್ಲಿ? ಇದರಲ್ಲಿ ನನ್ನ ತಪ್ಪೇನು? ಎಂದು ಕೇಳಿದ್ದಾನೆ. ಮುಂದೆ ಜೂಲಿಯಸ್ ಇದೇ ವಿಚಾರವಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಲು ಆರಂಭಿಸಿದನು. ಮಗನ ಸ್ಥಿತಿಯನ್ನು ಕಂಡ ಕೇಥಿ ಯಾವ ತಾಯಿಯೂ ಮಾಡದ ಕೆಲಸವನ್ನು ಮಗನಿಗಾಗಿ ಮಾಡಿದ್ದು, ಮಗನಿಗೆ ಜೀವನದಲ್ಲಿ ಎಲ್ಲರಂತೆ ಹೇಗಿರಬೇಕು ಮತ್ತು ಸೆಕ್ಸ್ ಜೀವನ ಎಂದರೇನು ಹೇಳಿಕೊಡಲು ಕಾಲ್ ಗರ್ಲ್ ಬುಕ್ ಮಾಡಿದ್ದಾಳೆ.
ಸದ್ಯ ಜೂಲಿಯಸ್ ೨೧ ವರ್ಷದವನಾಗಿದ್ದಾನೆ. ಜೂಲಿಯಸ್‌ನ ೨೧ ನೇ ಬರ್ತ್ ಡೇ ಆಚರಣೆಯ ವೇಳೆ ಆತನಿಗೆ ಸುಂದರವಾದ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಸದ್ಯ ಜೂಲಿಯಸ್ ಎಲ್ಲರಂತೆ ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಬೆಳವಣಿಗೆ ಹೊಂದಿದ್ದು, ಗೆಳತಿಯೊಂದಿಗೆ ಖುಷಿಯಾಗಿದ್ದಾನೆ.
No comments