Breaking News

ರಾಜ್ಯ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡತೊಡಗಿದೆ. ಇದು ಬೂದಿ ಮುಚ್ಚಿದ ಕೆಂಡದಂತಿದೆ. ಕೆಪಿಸಿಸಿ ಅಧ್ಯಕ್ಷ ಪರ ಮೇಶ್ವರ್‌ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ ವಿರುದ್ಧ  ಹಿರಿಯ ನಾಯಕರೇ ನೇರ ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಪದಾಧಿಕಾರಿ ಪಟ್ಟಿ ಬಿಡುಗಡೆಗೂ ಮೊದಲು ಎಲ್ಲ ನಾಯಕರಿಂದ ಪಟ್ಟಿ ಪಡೆದುಕೊಂಡಿ ರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಮತ್ತು ಕೆ.ಸಿ. ವೇಣುಗೋಪಾಲ ಯಾರ ಜತೆಗೂ ಚರ್ಚಿಸದೆ ತಮಗಿಷ್ಟ ಬಂದ ವರಿಗೆ ಅವಕಾಶ ಕಲ್ಪಿಸಿ

ದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ್‌, ಇಂಧನ ಸಚಿವ ಹಾಗೂ ಚುನಾ ವಣ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಸಮಾಧಾನಗೊಂಡಿ ದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಕೆ.ಸಿ. ವೇಣುಗೋಪಾಲ ಅವರಲ್ಲಿ ದೂರವಾಣಿ ಮೂಲಕ ಇಬ್ಬರೂ ನಾಯಕರು ಅಸಮಾಧಾನ ತೋಡಿಕೊಂಡಿದ್ದು, ಕಾಂಗ್ರೆಸ್‌ನಲ್ಲಿ ಪರಮೇಶ್ವರ್‌ ಒಬ್ಬರೇ ನಾಯಕರಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕು. ಯಾರೊಂದಿಗೂ ಚರ್ಚಿಸದೆ ಹೇಗೆ ಪಟ್ಟಿ ಬಿಡುಗಡೆ ಮಾಡಿದ್ದೀರಿ ಎಂದು

ತೀವ್ರ ಅತೃಪ್ತಿ ವ್ಯಕ್ತಪಡಿಸಿ ದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಕುರಿತು ರಾಹುಲ್‌ ಗಾಂಧಿ ಗಮನಕ್ಕೂ ತರಲಾಗು ವುದು ಎಂದು ವೇಣು ಗೋಪಾಲ ಅವರಲ್ಲಿ ಹೇಳಿದ್ದಾರೆನ್ನಲಾಗಿದೆ.

ಉತ್ತರ ಕರ್ನಾಟಕ ಭಾಗದಿಂದ ಎಸ್‌.ಆರ್‌. ಪಾಟೀಲ್‌ 10 ಮಂದಿಯ ಹೆಸರು ಶಿಫಾರಸು ಮಾಡಿ ಪಟ್ಟಿ ಕೊಟ್ಟಿದ್ದರೆ, ಅವರಲ್ಲಿ ಕೇವಲ ಇಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಡಿ.ಕೆ. ಶಿವಕುಮಾರ್‌ ತನ್ನ ಬೆಂಬಲಿಗರ 50 ಮಂದಿಯ ಹೆಸರು ಶಿಫಾರಸು ಮಾಡಿದ್ದರೆ, ಅವರಲ್ಲಿ ಕೇವಲ ಐದು ಮಂದಿಗೆ ಮಾತ್ರ ಸ್ಥಾನ ನೀಡಲಾಗಿದೆ. ಇನ್ನು ಕೆಪಿಸಿಸಿ ಇನ್ನೋರ್ವ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿರುವ 35 ಜನರ ಪಟ್ಟಿಯಲ್ಲಿ ಐವರನ್ನು ಮಾತ್ರ ಆಯ್ಕೆ ಮಾಡಲಾಗಿದೆ.

ಹೀಗಾಗಿ ಪಕ್ಷದಲ್ಲಿ ತಮಗೆ ಹುದ್ದೆ ಇದ್ದರೂ ತಮ್ಮ ಮಾತಿಗೆ ಬೆಲೆ ಇಲ್ಲದಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

No comments