Breaking News

ಗುಜರಾತ್ ಕಾಂಗ್ರೆಸ್‌ನ ಬಿನ್ನಮತ ಸ್ಪೋಟ 9 ಶಾಸಕರ ರಾಜೀನಾಮೆ


ಅಹಮದಾಬಾದ್: ಗುಜರಾತ್ ಕಾಂಗ್ರೆಸ್ ಗೆ ಇಂದು ಮತ್ತೊಂದು ಆಘಾತ ಎದುರಾಗಿದೆ, ನಿನ್ನೆಯಷ್ಟೆ ಕಾಂಗ್ರೆಸ್ ಪಕ್ಷಕ್ಕೆ ಮೂವರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬೆನ್ನಲ್ಲೇ ಇಂದು ಮತ್ತಿಬ್ಬರು ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಮಾನ್ ಸಿಂಗ್ ಚೌಹಾಣ್ ಮತ್ತು ಸನಾ ಭಾಯ್ ಚೌಧರಿ ಇಂದು ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದಾರೆ. ನಿನ್ನೆಯಿಂದ ಒಟ್ಟು 9 ಶಾಸಕರು ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ, ಅದರಲ್ಲಿ ಐದು ಶಾಸಕರ ರಾಜಿನಾಮೆ ಮಾತ್ರ ಅಂಗೀಕರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ರಮಣಬಾಯಿ ವೋರಾ ಹೇಳಿದ್ದಾರೆ. 
ನಿನ್ನೆ ಪಿ.ಟಿ ಪಟೇಲ್, ಬಲ್ವಂತ್ ಸಿನ್ ರಜಪೂತ್ ಮತ್ತು ತೇಜಶ್ರೀ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರು. 
ಗುಜರಾತ್ ರಾಜ್ಯಸಭೆಯ 9 ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ದಿಢೀರ್ ಬೆಳವಣಿಗೆಯಲ್ಲಿ ಮತ್ತೆ ಇಂದು ಇಬ್ಬರು ಶಾಸಕರು ರಾಜಿನಾಮೆ ನೀಡಿದ್ದಾರೆ, ಇದರೊಂದಿಗೆ 182 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಬಲ 54ಕ್ಕೆ ಕುಸಿದಿದೆ.

Source : PTI

No comments