Breaking News

ಕೇವಲ 45 ಸೆಕೆಂಡ್ ನಲ್ಲಿ ಚೀನಾ ಬಾಕ್ಸರ್ ನನ್ನು ಹೊಡೆದುರುಳಿಸುವೆ ವಿಜೇಂದರ್ ಸಿಂಗ್



ಹೊಸದಿಲ್ಲಿ: ಸೋಲರಿಯದ ಪ್ರೋ ಬಾಕ್ಸಿಂಗ್ ಚಾಂಪಿಯನ್ ವಿಜೇಂದರ್ ಸಿಂಗ್ ತನ್ನ ಎದುರಾಳಿಯನ್ನು ಮಣ್ಣುಮುಕ್ಕಿಸುವುದಾಗಿ ಹೇಳಿದ್ದಾರೆ. ಮುಂಬೈನಲ್ಲಿ ಆಗಸ್ಟ್ 5ರಂದು ನಡೆಯಲಿರುವ ಬಿಗ್ ಫೈಟ್‍ನಲ್ಲಿ ಎದುರಾಳಿ ಜುಲ್ಫಿಕರ್ ಮೈಮೈತಿಯಾಲಿರನ್ನು ಕೇವಲ 45 ಸೆಕೆಂಡ್‌ಗಳಲ್ಲಿ ಹೊಡೆದುರುಳಿಸುತ್ತೇನೆ ಎಂದು ಸವಾಲೆಸೆದಿದ್ದಾರೆ.

ಚೀನಾದ ಸರಕಲ್ಲವೇ?

'ತನ್ನ ಎದುರಾಳಿಯನ್ನು 45 ಸೆಕೆಂಡ್‌ಗಳಲ್ಲಿ ಸೋಲಿಸಲು ಪ್ರಯತ್ನಿಸುತ್ತೇನೆ. ಯಾಕೆಂದರೆ ಚೀನಾ ಉತ್ಪನ್ನಗಳು ಹೆಚ್ಚು ದಿನ ಬಾಳಿಕೆ ಬರಲ್ಲ!' ಎಂದು ವಿಜೇಂದರ್ ಚೀನಾ ಬಾಕ್ಸಿಂಗ್ ಚಾಂಪಿಯನ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. WBO ಏಷ್ಯಾ ಫೆಸಿಫಿಕ್ ಮಿಡಿಲ್ ವೆಯ್ಟ್ ಚಾಂಪಿಯನ್ ಆಗಿರುವ ವಿಜೇಂದರ್ ಅವರ ಸೋಲು-ಗೆಲುವಿನ ದಾಖಲೆ 8-0. ಅದೇ ರೀತಿ ಚೀನಾದ ಜುಲ್ಫಿಕರ್ ಮೈಮೈತಿಯಾಲಿ ಸಹ WBO ಓರಿಯಂಟಲ್ ಸೂಪರ್ ಮಿಡ್ಲ್ ವೆಯ್ಟ್ ಚಾಂಪಿಯನ್. ಅವರೂ ಸಹ ಸೋಲಿಲ್ಲದ ಸರದಾರ.

ಇದೀಗ ಭಾರತ ಮತ್ತು ಚೀನಾ ನಡುವೆ ಗಡಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ವಿಜೇಂದರ್ ಹೇಳಿಕೆ ಮಹತ್ವಪಡೆದುಕೊಂಡಿದೆ. ಹಾಗಾಗಿ ಇವರಿಬ್ಬರೂ ಈಗ ಮುಖಾಮುಖಿಯಾಗುತ್ತಿದ್ದು ಬಾಕ್ಸಿಂಗ್ ಅಖಾಡ ಅತೀವ ಕುತೂಹಲ ಕೆರಳಿಸಿದೆ. ಆಟ ಎಂದ ಮೇಲೆ ಸೋಲು ಗೆಲುವು ಸಹಜ. ಆದರೆ ಇವರಿಬ್ಬರಲ್ಲಿ ಮೊದಲು ಯಾರು ಗೆಲ್ಲಲಿದ್ದಾರೆ ಎಂಬ ಬಗ್ಗೆ ಬಾಕ್ಸಿಂಗ್ ಪ್ರಿಯರಲ್ಲಿ ಅತೀವ ಕುತೂಹಲ ಮೂಡಿದೆ.

'ನನಗಾಗಿ ಪ್ರಾರ್ಥಿಸಿ. ಶೇ.100ರಷ್ಟು ಗೆಲ್ಲುತ್ತೇನೆ. ಇನ್ನೊಂದು ನಾಕ್ ಔಟ್ ಗ್ಯಾರಂಟಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗೆ ಎದುರಾಳಿಯನ್ನು ಹೊಡೆದುರುಳಿಸುತ್ತೇನೆ' ಎಂದಿದ್ದಾರೆ ಸ್ಟಾರ್ ಇಂಡಿಯನ್ ಬಾಕ್ಸರ್ ಹಾಗೂ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದಿರುವ ವಿಜೇಂದರ್ ಸಿಂಗ್.

ಇನ್ನು ವಿಜೇಂದರ್‌ಗಿಂತಲೂ ವಯಸ್ಸಿನಲ್ಲಿ 9 ವರ್ಷ ಚಿಕ್ಕವರಾಗಿರುವ ಚೀನಾದ ನಂಬರ್ 1 ಬಾಕ್ಸರ್ ಜುಲ್ಫೀಕರ್ ಮೈಮೈಟಿಯಾಲಿ ಸಹ ಪ್ರತಿನಿತ್ಯ 10 ಗಂಟೆ ಟ್ರೈನಪ್ ಆಗುತ್ತಿದ್ದಾರೆ ಎಂದರೆ ಇನ್ನು ಯಾವ ಮಟ್ಟದಲ್ಲಿದೆ ಈ ಸ್ಪರ್ಧೆ ಎಂಬುದನ್ನು ನೀವೇ ಊಹಿಸಬಹುದು.


'ಜುಲ್ಫಿಕರ್ ಬಗ್ಗೆ ನನಗೆ ಹೆಚ್ಚಿಗೇನು ಗೊತ್ತಿಲ್ಲ. ವಿಕಿಪೀಡಿಯಾದಲ್ಲಿ ಅವರ ವಿವರ ತಿಳಿದುಕೊಂಡೆ. ಅಂತಹ ಫಲಿತಾಂಶಗಳೇನು ಇಲ್ಲ. ಟಿವಿಯಲ್ಲಿ ಒಮ್ಮೆ ಬಾಕ್ಸಿಂಗ್ ನೋಡಿದ್ದೆ. ನನಗೆ ಒಳ್ಳೆಯ ಟ್ರೈನಪ್ ನೀಡಿ ಅದರ ಪ್ರಕಾರ ಆಟಕ್ಕೆ ನನ್ನನ್ನು ಸಜ್ಜುಗೊಳಿಸಿ ಮುಂದಿನದು ನಾನು ನೋಡಿಕೊಳ್ಳುತ್ತೇನೆ ಎಂದು ತರಬೇತಿದಾರರಿಗೆ ಹೇಳಿದ್ದೇನೆ' ಎಂದಿದ್ದಾರೆ ವಿಜೇಂದರ್.



Source : online

No comments