Breaking News

ಅಮಿತ್ ಷಾ ಆಸ್ತಿ ದ್ವಿಗುಣ ವರದಿ ಸುಳ್ಳು ಕಾಂಗ್ರೆಸ್ ಗೆ ಬಾರಿ ಮುಖಭಂಗ


ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಸ್ತಿ ವಿವಾದ ಇಡೀ ದೇಶದಾದ್ಯಂತ ಸಂಚಲನ ಉಂಟು ಮಾಡಿತ್ತು ಆದರೆ ಇದು ನಕಲಿಯೊ ಅಸಲಿಯೊ ಎಂಬ ವಾದ ವಿವಾದಗಳು ಹುಟ್ಟಿಕೊಂಡಿದ್ದು ಈ ಸಂಭಂದ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಹಲವು ಕಡೆಗಳಲ್ಲಿ  ಬಾರಿ ವಾಗ್ವಾದಕ್ಕೆ ಕಾರಣವಾಗಿತ್ತು.

ಆದರೆ ಈಗ ಅವರ ಆಸ್ತಿ 300% ಹೆಚ್ಚಿದೆ ಎಂದು ಹೇಳಲಾದ ವರದಿ ಸುಳ್ಳು ಎಂದು ತಿಳಿದುಬಂದಿದೆ. ಇದನ್ನು ಮೊದಲು TOI  ಈ ಸುಳ್ಳು ವರದಿಯನ್ನು ಪ್ರಕಟಿಸಿದರು ತದ ನಂತರ ಎಲ್ಲಾ ಮಾದ್ಯಮಗಳ ಇದನ್ನು ಬಿತ್ತರಿಸಿದರು ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಜೆಪಿ ಅಮಿತ್ ಷಾ ಅವರ ತಾಯಿ ನಿಧನದ ಬಳಿಕ ತಾಯಿ ಹೆಸರಲ್ಲಿ ಇದ್ದ ಆಸ್ತಿ ಇವರ ಹೆಸರಿಗೆ ವರ್ಗಾವಣೆ ಆಗಿದೆ ಹೊರತು ಯಾವುದೇ ಅಕ್ರಮ ಆಸ್ತಿ ಅಲ್ಲ ಎಂದು ಸ್ಪಷ್ಟನೆ ನೀಡಿದೆ .
ಇತ್ತ ಬಿಜೆಪಿ ಸುಳ್ಳು ವರದಿಗೆ ಸರಿಯಾದ ದಾಖಲೆ ತೋರಿಸುತ್ತಿದಂತೆ TOI ತಾನು ಹಾಕಿದ ವರದಿಯನ್ನು ಅಳಿಸಿ ಹಾಕಿದೆ .

ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸಿ ಜನರ ಭಾವನೆಗೆ ಧಕ್ಕೆ ಹಾಗು ಅಮಿತ್ ಷಾ ಅವರ ವರ್ಚಸಿಗೆ ಧಕ್ಕೆ ಉಂಟಾಗಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದೆ  ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

1 comment:

  1. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ(Congress) ಸುಳ್ಳು ಸುದ್ದಿ ಹಬ್ಬಿಸಿ ಜನರ ಭಾವನೆಗೆ ಧಕ್ಕೆ ಹಾಗು ಅಮಿತ್ ಷಾ ಅವರ ವರ್ಚಸಿಗೆ ಧಕ್ಕೆ ಉಂಟಾಗಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ReplyDelete