Breaking News

ನಾನು ರಾಧಿಕಾ ಅಲ್ಲ ರಾಧಿಕಾ ಕುಮಾರಸ್ವಾಮಿ ವಿವಾದಕ್ಕೆ ತೆರೆ ಎಳೆದ ನಟಿ ರಾಧಿಕಾ ಕುಮಾರಸ್ವಾಮಿ ಬೆಂಗಳೂರು: ಇತ್ತೀಚೆಗೆ ನಟಿ ರಾಧಿಕಾ ಹಾಗೂ ಎಚ್‌.ಡಿ ಕುಮಾರಸ್ವಾಮಿ ಮಧ್ಯೆ ಏನೋ ಸರಿಯಿಲ್ಲ ಎಂಬ ಮಾತುಗಳು ಜೋರಾಗಿಯೇ ಕೇಳಿಬಂದಿದ್ದವು. ಈ ವಿಷಯವಾಗಿ ಮಾತನಾಡಿದ ರಾಧಿಕಾ ಎಲ್ಲ ಅಂತೆ ಕಂತೆಗಳಿಗೆ  ಅಂತಿಮ ಮುದ್ರೆ ಇಟ್ಟರು.

'ನನ್ನ ಹೆಸರು ರಾಧಿಕಾ ಅಷ್ಟೇ ಅಲ್ಲ, 'ರಾಧಿಕಾ ಕುಮಾರಸ್ವಾಮಿ'. ನಾನು ಸಾಯೋವರೆಗೂ ಈ ಹೆಸರು ಬದಲಾಗುವುದಿಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. 'ಕಾಂಟ್ರ್ಯಾಕ್ಟ್‌' ಚಿತ್ರದ ಪತ್ರಿಕಾಗೋಷ್ಠಿ ವೇಳೆಯಲ್ಲಿ ಗಾಸಿಪ್‌ ಕುರಿತು ರಾಧಿಕಾ ಅವರನ್ನು ಪ್ರಶ್ನಿಸಲಾಯಿತು.


ಪ್ರಶ್ನೆಗೆ ಉತ್ತರಿಸುತ್ತ, 'ನನ್ನ ಹೆಸರು ಬದಲಾಗಿಲ್ಲ. ಅದು ಬದಲಾಗುವುದೂ ಇಲ್ಲ. ನಾನು ಯಾವತ್ತಿಗೂ ರಾಧಿಕಾ ಕುಮಾರಸ್ವಾಮಿಯೇ. ಆ ಹೆಸರು ಸದಾ ನನ್ನ ಜತೆಯಲ್ಲೇ ಇರುತ್ತದೆ' ಎಂದು ಖಡಕ್ಕಾಗಿ ಹೇಳಿದರು. 'ನನ್ನ ಕುರಿತು ಈ ತರಹದ ನೂರು ಸುದ್ದಿ ಮತ್ತು ಗಾಸಿಪ್‍ಗಳು ಬರುತ್ತಲೇ ಇರುತ್ತವೆ. ಅದಕ್ಕೆ ನಾನೇನು ಮಾಡಲಿ?' ಎಂದು ಬೇಸರದಿಂದ ನುಡಿದರು ರಾಧಿಕಾ.

ಮಾತು ಮುಂದುವರೆಸುತ್ತ, 'ನನ್ನ ಹಾಗೂ ಕುಮಾರಸ್ವಾಮಿ ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ನಾವಿಬ್ಬರೂ ಚೆನ್ನಾಗಿದ್ದೇವೆ. ನಾನು ಬೆಂಗಳೂರನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನ ಕುಟುಂಬದ ಜತೆಗೆ ಸಮಯ ಕಳೆಯಬೇಕೆಂದು ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದೆ ಅಷ್ಟೇ. ಅದನ್ನು ಬಿಟ್ಟರೆ ಬೇರೇನೂ ಇಲ್ಲ. ಅಷ್ಟಕ್ಕೇ ನನ್ನ ಕುರಿತು ಈ ತರಹದ ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ನನ್ನ ಸಿನಿಮಾ ಕರಿಯರ್‌ಗೂ ಹಿನ್ನಡೆ ಉಂಟಾಯಿತು' ಎಂದು ರಾಧಿಕಾ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

No comments