Breaking News

ಅಡುಗೆ ಅನಿಲ ಬಳಕೆದಾರರಿಗೆ ಶಾಂಕಿಂಗ್ ನ್ಯೂಸ್ !

ನವದೆಹಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳು ₹4 ಏರಿಕೆ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಆದೇಶಿಸಿದ್ದಾರೆ.
ಮುಂದಿನ ವರ್ಷ ಮಾರ್ಚ್‌ ವೇಳೆಗೆ ಅಡುಗೆ ಅನಿಲದ ಮೇಲಿನ ಎಲ್ಲ ಸಬ್ಸಿಡಿ ತೆಗೆಯುವ ನಿಟ್ಟಿನಲ್ಲಿ ಪ್ರತಿ ತಿಂಗಳು ಬೆಲೆ ಏರಿಕೆ ಮಾಡುವಂತೆ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಸೂಚಿಸಿದೆ.
ಈ ಹಿಂದೆ ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ, ಹಿಂದುಸ್ತಾನ್‌ ಪೆಟ್ರೋಲಿಯಂ ತೈಲ ಸಂಸ್ಥೆಗಳು 14.2 ಕೆ.ಜಿ. ಸಬ್ಸಿಡಿ ಸಹಿತ ಸಿಲಿಂಡರ್‌ ಮೇಲಿನ ಬೆಲೆಯನ್ನು ಪ್ರತಿ ತಿಂಗಳು ₹2ರಷ್ಟು ಏರಿಕೆ(ವ್ಯಾಟ್‌ ಹೊರತುಪಡಿಸಿ) ಮಾಡುವಂತೆ ಕೇಂದ್ರ ಆದೇಶಿಸಿತ್ತು. ಇದೀಗ ಪ್ರತಿ ತಿಂಗಳು ₹4ರ ವರೆಗೂ ಹೆಚ್ಚಿಸುವಂತೆ ಹೇಳಿದೆ.
ಕಳೆದ ವರ್ಷ ದೆಹಲಿಯಲ್ಲಿ ₹419.18 ಇದ್ದ ಎಲ್‌ಪಿಜಿ ಸಿಲಿಂಡರ್‌ನ ಈಗಿನ ಬೆಲೆ ₹477.46. ದೇಶದಲ್ಲಿ ಸಬ್ಸಿಡಿ ಸಹಿತ ಎಲ್‌ಪಿಜಿ ಬಳಕೆ ಮಾಡುತ್ತಿರುವ 18.11 ಕೋಟಿ ಗ್ರಾಹಕರಿದ್ದು, 2.66 ಕೋಟಿ ಬಳಕೆದಾರರು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬಳಕೆ ಮಾಡುತ್ತಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ 2.5 ಕೋಟಿ ಬಡ ಮಹಿಳೆಯರು ಉಚಿತ ಅನಿಲ ಸಂಪರ್ಕ ಪಡೆದಿದ್ದಾರೆ.

Source : online

No comments