Breaking News

Breaking ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ !



  ​ದೆಹಲಿ: ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ಆದ ಗಾಯಗಳು ಗುಣಮುಖವಾಗಲು ಕಾಂಗ್ರೆಸ್ ಮತ್ತು ಮೈತ್ರಿಕೂಟಗಳಿಗೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಬಿಜೆಪಿಯು ಈಗ ಆ ಗಾಯಕ್ಕೆ ಮತ್ತೆ ಉಪ್ಪು ನೀರು ಹಾಕಲು ಹೊರಟಿದ್ದು ಎಲ್ಲರಿಗೂ ಮತ್ತೊಂದು ಆಘಾತವನ್ನು ನೀಡಲು ಸಿದ್ಧವಾಗಿದೆ. ಒಂದು ಕಡೆ ಪ್ರಧಾನಿ ಮೋದಿ ಅವರು ಪ್ರಜಾಪ್ರಭುತ್ವವನ್ನು ಕೊಂದಿದ್ದಾರೆ ಎಂದು ಕಾಂಗ್ರೆಸ್ ದೂಷಿಸುತ್ತಿದ್ದರೆ ಮತ್ತೊಂದು ಕಡೆ ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಹೌದು, ಇದು ಮೋದಿಗೆ ಮೋದಿ ದ್ವೇಷಿಸುವವರಿಗೆ ಆಘಾತಕಾರಿ ಸುದ್ದಿಯಾಗಿದೆ.

ಬಿಜೆಪಿಯ ಚಾಣಕ್ಯ, ಅಮಿತ್ ಶಾ ಅವರು ಎಐಎಡಿಎಂಕೆ ಬಣಗಳ ಬೆಂಬಲವನ್ನು ಪಡೆದುಕೊಳ್ಳಲು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣದ ನಂತರ, ತಮಿಳುನಾಡಿನ ರಾಜಕೀಯ ಹಲವಾರು ನಾಟಕಗಳನ್ನು ಕಂಡಿದೆ. DMK ಈ ಸಂದರ್ಭವನ್ನು ಬಳಸಿಕೊಳ್ಳಲು ಯತ್ನಿಸಿತು , ಶಶಿಕಾಲಾನನ್ನು ಜೈಲಿಗೆ ಕಳುಹಿಸಿದರೂ ತಮ್ಮ ನಿರೀಕ್ಷೆಯಂತೆ ಏನೂ ಸಾಧಿಸಲು DMK ಪಕ್ಷಕ್ಕೆ ಆಗಲಿಲ್ಲ.

ಎನ್‌ಡಿಎ ಶಿಬಿರದಲ್ಲಿ ಎಐಎಡಿಎಂಕೆ ಪಕ್ಷಗಳನ್ನೂ ಸೇರಿಸಿಕೊಳ್ಳುವಲ್ಲಿ ಬಿಜೆಪಿ ಎಲ್ಲಾ ಸಿದ್ಧತೆ ನಡೆಸುತ್ತಿದೆ ಮತ್ತು ಮಾತುಕತೆಗಳು ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಕ್ರಮದಿಂದ, ಎನ್‌ಡಿಎ ಮತ್ತು ಎಐಎಡಿಎಂಕೆ ಎರಡೂ ಪ್ರಯೋಜನವನ್ನು ಪಡೆಯುತ್ತವೆ. ತಮಿಳುನಾಡಿನಲ್ಲಿ ಬಿಜೆಪಿ ಒಂದು ಸ್ಥಾನ ಪಡೆಯದಿದ್ದರು ಬಿಜೆಪಿ ಬೆಂಬಲಿತ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬರುವುದು ಎಂದು ಹೇಳಲಾಗುತ್ತಿದೆ.

ಹಾಗಾಗಿ ತಮಿಳುನಾಡಿನ 3 ಸಂಸತ್ ಸದಸ್ಯರಿಗೆ ಅವಕಾಶ ಕಲ್ಪಿಸಲು ಕೇಂದ್ರೀಯ ಸಚಿವ ಸಂಪುಟದಲ್ಲಿ ಪುನರ್ರಚನೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಬ್ಬರು ತಮಿಳುನಾಡಿನಲ್ಲಿ ಆಡಳಿತಾರೂಢ ಪಕ್ಷದ ವಕ್ತಾರರನ್ನು ಹಿರಿಯ ಬಿಜೆಪಿ ಕಾರ್ಯಕರ್ತರನ್ನಾಗಿ ನೇಮಕ ಮಾಡಿದ್ದಾರೆ.

ಇದನ್ನು ಮಾಡುವ ಮೂಲಕ, 2019 ರ ಚುನಾವಣೆಯ ಸ್ಪರ್ಧೆಯಲ್ಲಿ ಬಿಜೆಪಿ ತನ್ನ ವಿರೋಧಿಗಳಿಗೆ ಬಿಗ್ ಶಾಕ್ ನೀಡಿದೆ. ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ಆಗಸ್ಟ್ ಮೊದಲ ವಾರದಲ್ಲಿ ನಿರೀಕ್ಷಿಸಬಹುದು. ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಎಐಎಡಿಎಂಕೆ ಕೂಡ ಎನ್‌ಡಿಎ ಶಿಬಿರದಲ್ಲಿ ಸೇರಿಕೊಂಡು ಸರಕಾರ ನಡೆಸಿದ್ದನು ಇಲ್ಲಿ ನೆನಪು ಇಟ್ಟುಕೊಳ್ಳ ಬೇಕಾದದ್ದು.

ರೆಸಾರ್ಟ್ನಲ್ಲಿ 44 ಗುಜರಾತ್ ಎಂಎಲ್ಎಗಳನ್ನು ಕಾಪಾಡುವಲ್ಲಿ ಕಾಂಗ್ರೆಸ್ಗೆ ಬಿಡುವಿಲ್ಲದಿದ್ದರೂ, ಬಿಜೆಪಿ ಚಾಣಾಕ್ಷ ತಂತ್ರ ಬಳಸುತ್ತಾ ಕಾಂಗ್ರೆಸ್ ಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ.  ಈವರೆಗೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೇಲೆ ಕಾಂಗ್ರೆಸ್ ಒಂದು ಹಿಡಿತವನ್ನು ಹೊಂದಿತ್ತು. ಆದರೆ ಆ ಪರಿಸ್ಥಿತಿ ಉರುಳಾಗುವ ದಿನಗಳು ತುಂಬಾ ದೂರವಿರುವುದಿಲ್ಲ.

No comments