Breaking News

ಬುರ್ಕಾ ತೊಟ್ಟು ಓಡುವಾಗ ಸಿಕ್ಕಿಬಿದ್ದ ಐಸಿಸ್ ಉಗ್ರರು ಮುಂದೆ ಏನಾಯ್ತು ನೋಡಿ



ಮೊಸುಲ್ : ಸತತ ಒಂಬತ್ತು ತಿಂಗಳ ಯುದ್ಧದ ನಂತರ ಮೊಸೂಲ್‌ ಪ್ರಾಂತ್ಯವನ್ನು ಐಸಿಸ್‌ ಹಿಡಿತದಿಂದ ಮುಕ್ತ ಗೊಳಿಸುವಲ್ಲಿ ಇರಾಕ್‌ ಸೇನೆ ಯಶಸ್ವಿಯಾಗಿದ್ದು ಗೊತ್ತೇ ಇದೆ. ಜು.10ರ ಸೇನಾ ವಿಜಯದ ನಂತರ ಅಸಂಖ್ಯ ಐಸಿಸ್‌ ಉಗ್ರರು ಕಂಬಿ ಎಣಿಸುತ್ತಿದ್ದು, ಕಣ್ತಪ್ಪಿಸಿ ಅವಿತುಕೊಂಡಿದ್ದ ನೂರಾರು ಮಂದಿ ಮೊಸೂಲ್‌ನಿಂದ ಪಲಾಯ ನಗೈಯ್ಯುವ ಪ್ರಯತ್ನದಲ್ಲಿದ್ದಾರೆ. ಹೀಗೆ ಮೊಸೂಲ್‌ನಿಂದ ಎಸ್ಕೇಪ್‌ ಆಗಲು ಕೆಲ ಐಸಿಸ್‌ ಉಗ್ರರು ಹೆಂಗಸರಂತೆ ಬಟ್ಟೆ ಧರಿಸಿ, ಮೇಕಪ್‌ ಮಾಡಿಕೊಂಡು, ಬುರ್ಖಾ ತೊಟ್ಟು ರಸ್ತೆಗಿಳಿದಿದ್ದರು. ಆದರೆ ಬುರ್ಖಾಧಾರಿಗಳ "ಗಂಡು ನಡಿಗೆ', ತಳುಕು-ಬಳುಕಲ್ಲಿದ್ದ ಹುಳುಕು ಕಂಡುಹಿಡಿದ ಸೈನಿಕರು, ಅವರನ್ನು ತಡೆದು, ಬುರ್ಖಾ ತೆಗೆಸಿದಾಗ ಉಗ್ರರ ಅಸಲಿ "ಬಣ್ಣ' ಬಯಲಾಗಿದೆ.
ಒತ್ತಡಕ್ಕೆ ಮಣಿದು ಧರಿಸಿದ ಈ ನನ್ನ ಉಡುಪುಗಳೇ ನನ್ನವರ ಸಾವಿಗೆ ಕಾರಣವಾದವು. ಈ ಬುರ್ಖಾದಿಂದಾಗೆ ಅವರು (ಉಗ್ರರು) ನನ್ನ ತಂದೆಯನ್ನ ಸುಟ್ಟು ಕೊಂದರು. ಇಂಥ ವಸ್ತ್ರಗಳಿಗೆ ಬೆಂಕಿ ಹಚ್ಚುವುದೇ ಲೇಸು. ನಾವು ಈ ಬಟ್ಟೆಗಳನ್ನು ಸುಡೋಣ, ಅಲ್ಲಾಹ್‌ ಅವರನ್ನು (ಉಗ್ರರನ್ನು) ಸುಡುತ್ತಾನೆ.
ಹೀಗೆ ಹೇಳುತ್ತಾ ತಾವು ಧರಿಸಿದ್ದ ಬುರ್ಖಾ ತೆಗೆದು ಬೆಂಕಿ ಹಚ್ಚಿದ್ದು ಸಿರಿಯಾ ಮಹಿಳೆಯರು. ಐಸಿಸ್‌ ಉಗ್ರರ ದಬ್ಟಾಳಿಕೆಯ ಆಡಳಿತದಿಂದ ಮುಕ್ತರಾದ ಸಂದರ್ಭವನ್ನು ಸಿರಿಯಾದ ರಖಾV ನಗರದ ಮಹಿಳೆಯರು ಸಭ್ರಮಿಸಿದ ಪರಿ ಇದು. ಮಹಿಳೆಯರು ಬುರ್ಖಾ ಸುಡುವಾಗ ಸುತ್ತ ನೆರೆದ ಪುಟ್ಟ ಹೆಣ್ಮಕ್ಕಳು, ಯುವತಿಯರು, "ಅವರು ನನ್ನ ತಂದೆಯ ಕೊಂದರು, ನನ್ನ ಪತಿಯ ಕೊಂದರು. ನನ್ನ ಮನೆಯನ್ನೇ ಸ್ಫೋಟಿಸಿ ಛಿದ್ರಗೊಳಿಸಿದರು,' ಎನ್ನುತ್ತಿದ್ದರು. ಅತ್ತ ಪುರುಷ ನೊಬ್ಬ, "ಉಗ್ರರ ಒತ್ತಾಯಕ್ಕೆ ಮಣಿದೇ ನಾನು ಉದ್ದದ ಗಡ್ಡ ಬೆಳೆಸಬೇಕಾಯ್ತು. ನನ್ನವರ ಸಾವಿಗೆ ಕಾರಣವಾದ ಗಡ್ಡವನ್ನು ತೆಗೆದುಬಿಡು,' ಎಂದು ಕೌÒರಿಕನತ್ತ ನೋಡಿದ. ಈ ವೇಳೆ ಉಗ್ರ ರಿಂದ ಮುಕ್ತರಾದ ಖುಷಿಗಿಂತ ತಮ್ಮವರನ್ನು ಕಳೆದುಕೊಂಡ ನೋವು ಅವರ ಕಂಗಳಲ್ಲಿ ತುಂಬಿತ್ತು.

No comments