Breaking News

ಹಿಂದುತ್ವ ಮನಸ್ಸಿನ ಅಧಿಕಾರಿಗಳನ್ನು ಗುರುತಿಸಿ ಮಟ್ಟ ಹಾಕುತ್ತೇವೆ : ಸಿದ್ದರಾಮಯ್ಯ



ಬೆಂಗಳೂರು : ಅಹಿಂದ ಅಸ್ತ್ರದ ಮೂಲಕ ಹಿಂದುತ್ವವನ್ನು ಎದುರಿಸಲು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಈಗ ಹಿಂದುತ್ವವನ್ನು ಹತ್ತಿಕ್ಕಲು ಮಾಸ್ಟರ್'ಪ್ಲಾನ್ ಮಾಡಿರುವ ಸುಳಿವು ಸಿಕ್ಕಿದೆ. ನಿನ್ನೆಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ನಡೆದ ಪ್ರಗತಿಪರ ಚಿಂತಕರ ಸಂವಾದದಲ್ಲಿ ಸಿದ್ದರಾಮಯ್ಯ ತಮ್ಮ ಹಿಂದುತ್ವ ನಿಗ್ರಹ ಕಾರ್ಯತಂತ್ರವನ್ನು ತೋರ್ಪಡಿಸಿದ್ದಾರೆ. ಹಿಂದುತ್ವ ಮನಸ್ಸಿನ ಸರಕಾರಿ ಅಧಿಕಾರಿಗಳನ್ನ ಗುರುತಿಸಿ ಮಟ್ಟಹಾಕಲು ಸರಕಾರ ಯತ್ನಿಸಲಿದೆ ಎಂದು ಸಿಎಂ ಹೇಳಿದ್ದಾರೆ.
ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಿಂದುತ್ವ ಮನಸ್ಸಿನ ಅಧಿಕಾರಿಗಳಿದ್ದಾರೆ. ಸರಕಾರವು ಇದನ್ನ ಸಹಿಸುವುದಿಲ್ಲ. ಇಂತಹ ಅಧಿಕಾರಿಗಳನ್ನು ಗುರುತಿಸಿ ಹತ್ತಿಕ್ಕುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಕೋಮುವಾದಿಗಳ ಕುತಂತ್ರಕ್ಕೆ ಹಿಂದುಳಿದ ವರ್ಗಗಳ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ, ಹಿಂದೂಪರ ಹೋರಾಟಗಾರರ ಹತ್ಯೆಗೆ ತಮ್ಮದೇ ಹೊಸ ವ್ಯಾಖ್ಯಾನ ನೀಡಿದ್ದಾರೆ.

No comments