ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್ ಶಾಸಕನಿಗೆ ಸಾರ್ವಜನಿಕರಿಂದ ಮಂಗಳಾರತಿ
ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಕೂಳೂರಿನ ಪಳನೀರು ನಿವಾಸಿ ನಿಖಿಲೇಶ್ ಎನ್ನುವ ಬಾಲಕ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಆ ಹಿನ್ನೆಲೆಯಲ್ಲಿ ಬಾಲಕನ ಮನೆಗೆ ಭೇಟಿ ನೀಡಿದ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ಅವರು ತಾನು ಬಾಲಕನ ಚಿಕಿತ್ಸೆಗಾಗಿ ೧ ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತೆಗೆಸಿಕೊಟ್ಟಿರುವುದಾಗಿ ಸ್ಥಳದಲ್ಲಿದ್ದವರಲ್ಲಿ ಹೇಳುತ್ತಿದ್ದರು.ಇದರಿಂದ ಆಕ್ರೋಶಕ್ಕೊಳಗಾದ ಸಾರ್ವಜನಿಕರು ಶಾಸಕರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಸಾವಿನ ಮನೆಯಲ್ಲಿ ಶಾಸಕರು ರಾಜಕೀಯ ಮಾಡುತ್ತಿದ್ದಾರೆಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ೨ ಲಕ್ಷ ನೀಡುವುದಾಗಿ ಭರವಸೆ ನೀಡಿದ್ದ ಶಾಸಕರು ಒಂದು ಲಕ್ಷ ಮಾತ್ರ ನೀಡಿರುವುದಲ್ಲದೆ, ಅದನ್ನು ಸಾವಿನ ಮನೆಯಲ್ಲಿ ಡಂಗುರ ಹೊಡೆಯ ಅಗತ್ಯವೇನಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದೂ ನಡೆದಿದೆ.
No comments