ಸ್ಪೀಕರ್ ಮೇಲೆ ಕಾಗದ ತೂರಿದ ಆರು ಕಾಂಗ್ರೆಸ್ ಸಂಸದರ ಅಮಾನತು
ನವದೆಹಲಿ: ಲೋಕ ಸಭೆ ಕಲಾಪದಲ್ಲಿ ಅಸಮರ್ಪಕ ನಡವಳಿಕೆ ತೋರಿ ಸ್ಪೀಕರ್ ಕುರ್ಚಿಯತ್ತ ಕಾಗದ ಚೂರುಗಳನ್ನು ಎಸೆದು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಕಾಂಗ್ರೆಸ್‌ನ ಆರು ಸಂಸದರನ್ನು ಐದು ದಿನಗಳ ಮಟ್ಟಿಗೆ ಅಮಾನತು ಮಾಡಲಾಗಿದೆ .ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಗೌರವ್ ಗೊಗೋಯ್, ಕೆ.ಸುರೇಶ್, ಅಧೀರ್ ರಾಜನ್ ಚೌಧುರಿ, ರಂಜೀತ್ ರಂಜನ್, ಸುಷ್ಮಿತಾ ದೇವ್ ಮತ್ತು ಎಂಕೆ ರಾಘವನ್ ಅವರನ್ನು 5 ದಿನಗಳ ಕಾಲ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಬೋಫೊರ್ಸ್ ಹಗರಣ ಸಂಬಂಧಿತ ಮತ್ತು ಇತ್ತೀಚೆಗೆ ಗೋರಕ್ಷಕರಿಂದ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಸದನದ ಬಾವಿಗಿಳಿದ ಕಾಂಗ್ರೆಸ್ ಶಾಸಕರು ಘೋಷಣೆಗಳನ್ನು ಕೂಗಿ ಗದ್ದಲ ಸೃಷ್ಟಿಸಿದ್ದಾರೆ. ಅಲ್ಲದೆ, ಸ್ಪೀಕರ್ ಕುರ್ಚಿಯತ್ತ ಕಾಗದದ ಚೂರುಗಳನ್ನು ಎಸೆದಿದ್ದಾರೆ. ಹೀಗಾಗಿ ಅವರನ್ನು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಮಾನತುಗೊಳಿಸಿದ್ದಾರೆ ಎಂದು ವರದಿ ಆಗಿದೆ
loading...
No comments