ಬೊಕ್ಕಸದ ನಷ್ಟ ತುಂಬಲು 900 ಮದ್ಯದ ಅಂಗಡಿ ತೆರೆಯಲು ಮುಂದಾದ ಸರಕಾರ
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಬಂದ್ ಮಾಡಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕ ರಾಜ್ಯ ಸರಕಾರ ತನ್ನ ಬೊಕ್ಕಸಕ್ಕೆ ಉಂಟಾಗಿದ್ದ ನಷ್ಟವನ್ನು ತುಂಬಲು 900 ಮದ್ಯದ ಅಂಗಡಿ ತೆರೆಯಲು ಮುಂದಾಗಿದೆ.
ಬೆಂಗಳೂರಿನಲ್ಲಿ 30 ಹಾಗೂ ಇತರೆ ಭಾಗಗಳಲ್ಲಿ 870 ಸೇರಿದಂತೆ ಒಟ್ಟು 900 ನೂತನ ಮದ್ಯದ ಅಂಗಡಿಗಳು ಮುಂದಿನ ತಿಂಗಳಿನಲ್ಲೇ ತೆರೆಯಲಿವೆ.
ಎಂಎಸ್‍ಐಎಲ್ ಮೂಲಕ ಬಾರ್ ಅಂಗಡಿಗಳನ್ನು ತೆರೆಯಲು ಮುಂದಾಗಿರುವ ಸರಕಾರ, ಸುಪ್ರೀಂ ಆದೇಶದ ಬಳಿಕ ಉಂಟಾಗಿರುವ ನಷ್ಟವನ್ನು ಪೂರೈಸಲು ಸರಕಾರ ಈ ಯೋಜನೆ ನಿರೂಪಿಸಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಐ ಎನ್ ಎನ್ ಪ್ರಸಾದ್ ತಿಳಿಸಿದ್ದಾರೆ.
ಆದಾಯ ಕುಸಿತವು ಸರಕಾರದ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸುಪ್ರೀಂ ಆದೇಶವನ್ನು ಮನದಲ್ಲಿಟ್ಟುಕೊಂಡೇ ಸರಕಾರ ಇದೀಗ ನೂತನ 900 ಮದ್ಯದಂಗಡಿಗಳನ್ನು ತೆರೆಯಲು ಎಚ್ಚರಿಕೆಯ ಯೋಜನೆ ತೆಗೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ಮದ್ಯದಂಗಡಿಗಳನ್ನು ಪ್ರಾರಂಭಿಸಲು ಸರಕಾರದಿಂದ ನಿರ್ದೇಶನ ಬಂದಿದೆ. ಈಗಾಗಲೇ ನಾವು ಪ್ರಕ್ರಿಯೆಗಳನ್ನು ಆರಂಭಿಸಿದ್ದೇವೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.
loading...
No comments