Breaking News

ಕಸಾಯಿಖಾನೆಯಲ್ಲಿ ಪತ್ನಿಯ ಕುತ್ತಿಗೆ ಕುಯ್ದು ಬರ್ಬರ ಕೊಲೆ ಮಾಡಿದ ಕಟುಕ ಪತಿ



ಕಾಸರಗೋಡು : ಕಟುಕ ಮಾಂಸದ  ವ್ಯಾಪಾರಿ ಯುವಕನೊಬ್ಬ ತನ್ನ ಪತ್ನಿಯನ್ನು ಕಸಾಯಿಖಾನೆಯಲ್ಲಿ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾನೆ.

ನಾಡನ್ನೇ ನಡುಗಿಸಿದ ಈ ಕೃತ್ಯ ಭಾನುವಾರ ಮುಂಜಾನೆ ನಡೆದಿದೆ. ಮಾಂಸ ವ್ಯಾಪಾರಿಯಾದ ಪಿ ನಿಝಾಮುದ್ದೀನ್ ಎಂಬಾತನ ಪತ್ನಿ ಕಲ್ಲಿಕೋಟೆ ನರಿಕ್ಕುನಿ ಕೂಟಂಪೂರ್ ಲಕ್ಷಂವೀಡು ಕಾಲೊನಿ ನಿವಾಸಿ ರಹೀನ (30) ಎಂಬಾಕೆ ಕೊಲೆಯಾದ ಯುವತಿ.

ಭಾನುವಾರ ಮುಂಜಾನೆ 2 ಗಂಟೆಗೆ ನಿಝಾಮುದ್ದೀನ್ ಪತ್ನಿಯನ್ನು ಅಂಗಡಿಗೆ ಕರೆದೊಯ್ದು ಬರ್ಬರ ಕೊಲೆಗೈದಿರುವುದಾಗಿ ಪೊಲೀಸರು  ತಿಳಿಸಿದ್ದಾರೆ. ಮುಂಜಾನೆ 4 ಗಂಟೆಗೆ ಗ್ರಾಹಕರು ಅಂಗಡಿಗೆ ಬಂದಾಗ ರಹೀನ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.




loading...

No comments