ಬೆಂಗಳೂರು : ಕನ್ನಡ ರಿಯಾಲಿಟಿ ಶೋಗಳಲ್ಲೇ ಪ್ರಮುಖ ಸ್ಥಾನ ಹೊಂದಿರುವ ಹಾಗೂ ಅತೀ ಹೆಚ್ಚು ಚರ್ಚೆಗೊಳಪಡುವ ರಿಯಾಲಿಟಿ ಶೋ ಆದ ಬಿಗ್’ಬಾಸ್ ನ  5 ಆವೃತ್ತಿಯನ್ನು ಶೀಘ್ರದಲ್ಲಿಯೇ ಶುರುವಾಗಲಿದೆ. ಬಿಗ್ ಬಾಸ್ ಸೀಸನ್ 4 ಆವೃತ್ತಿಲ್ಲಿ ವಿನ್ನರ್ ಆದ ಪ್ರಥಮ್ ನ ಆವಾಂತರಗಳು ಇನ್ನೂ ಕೂಡಾ  ನಿಂತಿಲ್ಲ, ಆಗಲೇ ಬಿಗ್ ಬಾಸ್ ಸೀಸನ್ 5 ಗೆ ಸ್ಪರ್ಧಿಗಳ ಹುಡುಕಾಟ ನಡೆಯುತ್ತಿದ್ದು, ಸಂಭಾವ್ಯರ ಆಯ್ಕೆ ಪಟ್ಟಿಯೂ ಕೂಡಾ ಸಿದ್ದಗೊಂಡಿದೆ. ಮನೋರಂಜನ ದೃಷ್ಟಿಕೋನವನ್ನಿಟ್ಟುಕೊಂಡು ನಡೆಯುವ ರಿಯಾಲಿಟಿ ಶೋನಲ್ಲಿ ಹುಚ್ಚವೆಂಕಟ್, ಪ್ರಥಮ್ ಹೆಸರು ಹೆಚ್ಚು ಚರ್ಚೆಗೊಳಪಟ್ಟಿತ್ತು. ಸೀಸನ್ 5 ರಲ್ಲಿಯೂ ಕೂಡಾ ಅಂತಹದ್ದೇ ಮತ್ತೊಂದು ಕ್ಯಾರೆಕ್ಟರ್ ಇರುವ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಸ್ಪರ್ಧಿ’ಗಳ ಬೇಟೆ ಶುರುವಾಗಿದ್ದು, ಕಳೆದ 4 ಆವೃತ್ತಿಗಳಿಗಿಂತ ವಿಭಿನ್ನವಾಗಿ ಆಯೋಜಿಸುವ ಯೋಜನೆಯಲ್ಲಿ ಕಾರ್ಯಕ್ರಮ ತಂಡ ಸಿದ್ಧವಾಗಿದೆ. ಕಳೆದ 4 ಆವೃತ್ತಿಗಳಲ್ಲಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶೃತಿ ಹಾಗೂ ಪ್ರಥಮ್  ಟ್ರೋಪಿ ಗೆದ್ದುಕೊಂಡಿದ್ದರು. ಪ್ರತಿಯೊಂದು ಆವೃತ್ತಿಯಲ್ಲೂ ವಿಶಿಷ್ಟತೆ ಹೊಂದಿರುವ ಬಿಗ್’ಬಾಸ್ ಈ ಬಾರಿ ಮತ್ತಷ್ಟು ವಿಶೇಷತೆ ಹೊಂದಿರುತ್ತದೆ. ಸಾರ್ವಜನಿಕರಿಗೂ ಈ ಸಾರಿ ಅವಕಾಶವಿದೆಯೆಂದು ಆಯೋಜಕರೆ ತಿಳಿಸಿದ್ದಾರೆ. ಇದಕ್ಕಾಗಿ ಸಿದ್ದತೆಗಳು ಸಹ ನಡೆಯುತ್ತಿದೆ. ಪ್ರಮುಖ ಸಂಭಾವ್ಯರ ಹೆಸರುಗಳು ಇಲ್ಲಿವೆ.
1) ಕೋಮಲ್ (ನಟ)
2) ತಾರ (ನಟಿ)
3) ಸುನಿಲ್ ರಾವ್ (ನಟ)
4) ಭಾವನ (ನಟಿ)
5) ರಾಜು ತಾಳಿಕೋಟೆ (ಹಾಸ್ಯನಟ)
6) ಪಂಕಜ್ ನಾರಾಯಣ (ಎಸ್. ನಾರಾಯಣ್ ಪುತ್ರ)
7) ಮುರುಳಿ (ಒಗ್ಗರಣೆ, ಮುರುಳಿ ಹೋಟೆಲ್ ಖ್ಯಾತಿ)
8) ದಿಗಂತ್ (ನಟ)
9) ಅನುರಾಧ ಭಟ್ (ಗಾಯಕಿ)
10) ಸಂತೋಷ್ (ಪ್ರಥಮ್ ಸ್ನೇಹಿತ)

Source/online