Breaking News

ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಭಾಗ್ಯ


ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳ ಬಗ್ಗೆ ವರದಿ ಮಾಡಿದ ಡಿಐಜಿ ರೂಪಾ ಅವರಿಗೆ ಸರ್ಕಾರ ವರ್ಗಾವಣೆ ಭಾಗ್ಯ ಕರುನಿಸಿದೆ.

ಕಾರಾಗೃಹ ಡಿಐಜಿಯಾಗಿದ್ದ ಡಿ ರೂಪಾ ಅವರನ್ನು ಟ್ರಾಫಿಕ್ ಇಲಾಖೆ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.ರಸ್ತೆ ಸುರಕ್ಷತಾ ವಿಭಾಗದಲ್ಲಿದ್ದ ಎಡಿಜಿಪಿ ಎಎಸ್‌ಎನ್ ಮೂರ್ತಿಯವರನ್ನು ಅರಣ್ಯ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.



ಕಾರಾಗೃಹ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಸತ್ಯನಾರಾಯಣ ರಾವ್ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿದ್ದ ಮೇಘರಿಕ್ ಅವರನ್ನು ನಿಯೋಜಿಸಿದೆ.

No comments