Breaking News

ಮುಂಬೈನಲ್ಲಿ ಶಂಕಿತ ಲಷ್ಕರ್ ಉಗ್ರನ ಬಂಧನ


ನವದೆಹಲಿ  :  ಮುಂಬೈ  ವಿಮಾನ ನಿಲ್ದಾಣದಲ್ಲಿ ಲಷ್ಕರ್ ಇ ತೈಬಾದ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಉತ್ತರಪ್ರದೇಶದ ಸಲೀಂ ಖಾನ್ ಎಂದು ಹೇಳಲಾಗಿದೆ  . ಇತ  ಲಷ್ಕರ್ ಇ ತೈಬಾ ಉಗ್ರ ಸಂಘಟನೆಗಾಗಿ ಕೆಲಸ ಮಾಡುವ ಶಂಕೆ ಇದ್ದು, ಆತ ಉತ್ತರಪ್ರದೇಸದ ಫತೇಪುರದವನು.ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ . 

ದಕ್ಷಿಣ ಕಾಶ್ಮೀರದಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಹತ್ಯೆಯ ಸಂಬಂಧ ಆತನನ್ನು ಬಂಧಿಸಲಾಗಿತ್ತು. ಕಳೆದ ಒಂಬತ್ತು ವರ್ಷಗಳಿಂದ ಈತನಿಗಾಗಿ ಹುಡುಕಾಟ ನಡೆಯುತ್ತಿತ್ತು. ಸಲೀಂ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧಿಸಲಾಗಿದೆ. ಆತ ಎಲ್ಲಿಂದ ಬರುತ್ತಿದ್ದ ಎಂಬ ವಿಚಾರವನ್ನು ಮಾತ್ರ ಬಹಿರಂಗ ಪಡಿಸಿಲ್ಲ.



No comments