Breaking News

ಜೈಲಿನಲ್ಲಿ ನಡೆದ ಅಕ್ರಮದ ಕುರಿತು ದ್ವನಿ ಎತ್ತಿದ ಖಡಕ್ ಅಧಿಕಾರಿಗೆ ಝಾನ್ಸಿ ರಾಣಿ ಪ್ರಶಸ್ತಿಹುಬ್ಬಳ್ಳಿ :  ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಅಕ್ರಮದ ಕುರಿತು ದ್ವನಿ ಎತ್ತಿದ ಖಡಕ್ ಅಧಿಕಾರಿ ರೂಪ ಡಿ ಐಪಿಎಸ್ ಅವರಿಗೆ ಈಗ ಸರಕಾರ ವರ್ಗಾವಣೆ ಮಾಡಿದ್ದು ರಾಜ್ಯಾದ್ಯಂತ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ ಇದರ ಬೆನ್ನಲ್ಲೇ ಹಲವಾರು ಸಂಘ ಸಂಸ್ಥೆಗಳು ರೂಪ ಅವರ ಕಾರ್ಯದಕ್ಷತೆಯನ್ನ ಮೆಚ್ಚಿ ಅಭಿನಂದಿಸಿದ್ದಾರೆ ಹಾಗೂ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ .ಮತ್ತು ಮಹಿಳಾ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ರಾಜ್ಯದಲ್ಲಿ ಯಾರೂ ಮಾಡದ ಕಾರ್ಯವನ್ನು ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ವರದಿ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಝಾನ್ಸಿ ರಾಣಿ  ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿ ಅವರಿಗೆ ನೀಡುತ್ತಿದ್ದರೆನ್ನಲಾದ ಸವಲತ್ತುಗಳನ್ನು ಹೊರ ಹಾಕಿ ಜೈಲಿನ ಅಕ್ರಮಗಳನ್ನು ಬಯಲು ಮಾಡಿದ್ದಾರೆ.

No comments