Breaking News

ರಾಮಂದಿರದ ಬಗ್ಗೆ ನಡೆದ ಪೋಲಿಂಗ್ ನಲ್ಲಿ ಬೆಂಗಳೂರು ಮೂಲದ ಶಂಕಿತ ಉಗ್ರನ ಕೈವಾಡ?





ಬೆಂಗಳೂರು: ಜು 9 ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳದಾ ವಾಟ್ಸಪ್, ಪೇಸ್ಬುಕ್ ನಲ್ಲಿ ಒಂದು ಸಂದೇಶ ದೇಶದಾದ್ಯಂತ ವೈರಲ್ ಆಗಿತ್ತು ಅದರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸ ಬೇಕೊ ಬಾಬ್ರಿ ಮಸೀದಿ ನಿರ್ಮಿಸಬೇಕೋ ಅನ್ನುವ ಒಂದು ಅಂತರ್ಜಾಲ ಮತದಾನದ ಉತ್ತರಪ್ರದೇಶ ಸರಕಾರದ ಹೆಸರಿನ ಒಂದು ಲಿಂಕ್ ಹರಿದಾಡುತ್ತಾ ಇತ್ತು ಅದರಲ್ಲಿ ಲಕ್ಷಂತಾರ ಮಂದಿ ಮತದಾನ ಮಾಡಿದ್ದು ತಿಳಿದುಬಂದಿದೆ .

   ಇದು ವೈರಲ್ ಆಗುತ್ತಾ ಇದಂತೆ ಇದರ ಬಗ್ಗೆ ಆರ್ ಟಿ ಐ ಕಾರ್ಯಕರ್ತರೊಬ್ಬರು ಇದರ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದರು ದಿನಗಳು ಕಳೆದ ಹಾಗೆ ಈ ಮತದಾನದ ಅಸಲಿಯತ್ತು ಬಯಲಾಗಿದ್ದು ದೇಶವೆ ಬೆಚ್ಚಿ ಬಿಳಿಸುವ ಮಾಹಿತಿ ಅದರಿಂದ ಹೊರಬಿದ್ದಿದೆ . ಉತ್ತರ ಪ್ರದೇಶ ಸರಕಾರದ ಹೆಸರಲ್ಲಿ ಇರುವ ಆ ಲಿಂಕ್ ಅಸಲಿಗೆ ಪೇಕ್ ಆಗಿದ್ದು ಉತ್ತರಪ್ರದೇಶ ಸರ್ಕಾರ ಸ್ಪಷ್ಟನೆ ನೀಡಿದೆ ಇದು ದೆಹಲಿ ಮೂಲದ ವ್ಯಕ್ತಿಯ ಹೆಸರಲ್ಲಿ ಆರಂಭವಾಗಿದ್ದು ಆದರೆ ಇದರಲ್ಲಿ ಇರುವ ಮೊಬೈಲ್ ಸಂಖ್ಯೆ ಬೆಂಗಳೂರು ಮೂಲದ ಶಂಕಿತ ಉಗ್ರನ ಸಂಖ್ಯೆ ಎಂದು ತಿಳಿದುಬಂದಿದೆ ಈ ಬಗ್ಗೆ ಕೂಡಲೆ ಕೆಂದ್ರ ಸರಕಾರಕ್ಕೆ ಮಾಹಿತಿ ರವಾನಿಸಿದ ಆರ್ ಟಿ ಐ ಕಾರ್ಯಕರ್ತ ಇನ್ನೊಂದು ಬೆಚ್ಚಿ ಬಿಳಿಸುವ ಮಾಹಿತಿ ನೀಡಿದ್ದು ಅಲ್ಲಿ ಮತದಾನ ಮಾಡಿದ ಎಲ್ಲ ಮತದಾರರ ದಾಖಲೆಗಳು ಆ ಸರ್ವರ್‌ ನಲ್ಲಿ ದಾಖಲಾಗಿದ್ದು ಇದರಿಂದ ಖಾಸಗಿ ಜೀವನಕ್ಕೆ ಬಹಳ ತೊಂದರೆಯಾಗುವ ಸಂಭವ ಇದೆ ಎಂದು ಹೇಳಿದ್ದಾರೆ ಒಟ್ಟಾರೆಯಾಗಿ ಇದೊಂದು ಪೇಕ್ ಮತದಾನದ ಲಿಂಕ್ ಆಗಿದ್ದು ಸರಕಾರ ಕೂಡಲೆ ಎಚ್ಚೆತ್ತು ಇದರ ಬಗ್ಗೆ ಸಮಗ್ರ ತನಿಖೆ ಮಾಡಿ ಮುಂದಾಗುವ ಭಾರಿ ಅನಾಹುತ ತಪ್ಪಿಸಬೇಕಾಗಿ  ಮನವಿ ಮಾಡಿದ್ದಾರೆ

No comments