Breaking News

ಅಡ್ಯಾರು ಕಟ್ಟೆ ಯುವಕನ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಸೆರೆ



ಮಂಗಳೂರು :  ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರುಪದವಿನಲ್ಲಿ ವಿದ್ಯಾರ್ಥಿಯೊಬ್ಬನಿಗೆ  ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಮೂವರು  ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ.

 ನೌಶದ್  ಬೈಕ್ ನಲ್ಲಿ  ಕೇರಳದ ಮಲಪುರಂ ನಿವಾಸಿ ಮಹಮ್ಮದ್ ಸಜೀದ್ ಎಂಬವನೊಂದಿಗೆ ಅಡ್ಯಾರ್ ನಲ್ಲಿ ಚಹಾ ಕುಡಿದು ವಾಪಸ್ಸು ಅಡ್ಯಾರ್ ನಿಂದ ಬಿತ್ತು ಪಾದೆಯ ತನ್ನ ಮನಗೆ ಹೋಗುತ್ತಿರುವಾಗ ಸಂಜೆ 4-15 ಗಂಟೆಗೆ ಅಡ್ಯಾರ್ ಪದವಿನಿಂದ ಸ್ವಲ್ಪ ಹಿಂದೆ ರಸ್ತೆ ಬದಿಯಲ್ಲಿ  3 ಮಂದಿ ಯುವಕರು ಕೊಲೆ ಯತ್ನ ನಡೆಸಿದ್ದರು .


ಬಂಧಿತ ಆರೋಪಿಗಳನ್ನು ನಿತಿನ್ ಪೂಜಾರಿ, ಪ್ರಾಯ(21) ಪ್ರಾಣೇಶ್ ಪೂಜಾರಿ, ಪ್ರಾಯ(20) ಮತ್ತು ಕಿಶನ್ ಪೂಜಾರಿ, ಪ್ರಾಯ(21), ಎಂದು ಗುರುತಿಸಲಾಗಿದೆ .


ಪೊಲೀಸ್ ಕಮೀಷನರ್ ಶ್ರೀ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ   ಶ್ರೀ ಹನುಮಂತರಾಯ ಮತ್ತು ಎಸಿಪಿ ಸಿಸಿಆರ್ ಬಿ ಶ್ರೀ ವೆಲೆಂಟೈನ್ ಡಿ ಸೋಜಾ  ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ 

No comments