Breaking News

ಶರತ್ ಹತ್ಯೆಯಾಗಲು ಕಾರಣರಾದ ಸಚಿವ ರಮಾನಾಥ ರೈ, ಯು.ಟಿ. ಖಾದರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ : ರಾಮುಲುಲಿಂಗಸೂರು: ಹಿಂದೂ-ಮುಸ್ಲಿಂರ ಬಗ್ಗೆ ಪ್ರಚೋದನೆಕಾರಿಯಾಗಿ ಹೇಳಿಕೆ ನೀಡಿ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಹತ್ಯೆಯಾಗಲು ಕಾರಣರಾದ ಸಚಿವ ರಮಾನಾಥ ರೈ, ಯು.ಟಿ. ಖಾದರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹಿಂದೂ-ಆರ್‌ಎಸ್‌ಎಸ್ ಕಾರ್ಯಕರ್ತರ ಸರಣಿ ಹತ್ಯೆ, ಹಲ್ಲೆಗಳು ನಡೆದಿದೆ. ಅಧಿಕಾರಿಗಳ ಮೇಲೆ ಶೂಟೌಟ್ ನಡೆಯುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇದರಿಂದ ರಾಜ್ಯದಲ್ಲಿ ನೆಮ್ಮದಿ ವಾತವರಣ ಮಾಯಾವಾಗಿ ಜನತೆ ಭಯದ ವಾತವರಣದಲ್ಲಿ ಜೀವನ ನಡೆಸುವಂತಾಗಿದೆ. ರಾಜ್ಯ ದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದೆ. ಮಂಗಳೂರಿನಲ್ಲಿ ರೈ, ಖಾದರ್ ಒಂದು ಧರ್ಮದ ಬಗ್ಗೆ ಪ್ರಚೋದನೆಕಾರಿ ಮಾತನಾಡಿ, ಇಡೀ ಕರಾವಳಿಯನ್ನು ಹೊತ್ತಿ ಉರಿಯುಂತೆ ಮಾಡಿ ಸಚಿವ ಸ್ಥಾನಕ್ಕೆ ಕಳಂಕ ತಂದಿದ್ದಾರೆ ಎಂದರು.


-vishwani 

No comments