Breaking News

ಮಾನವೀಯತೆ ಮೆರೆದ ಪೊಲೀಸ್ ಕಾನ್‌ಸ್ಟೇಬಲ್ ಕಿಶೋರ್ ಪೂಜಾರಿ




ಮಂಗಳೂರು : ಬಸ್ಸಿಗಾಗಿ ಕಾಯುತ್ತಿದ್ದ ಪುಟ್ಟ ಬಾಲಕನ ಕಾಲಿನಿಂದ ರಕ್ತ ಹರಿಯುತ್ತಿರುವುದನ್ನು ಕಂಡ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ. ಕಿಶೋರ್ ಪೂಜಾರಿ ಹೆಸರಿನ ಸಿಬ್ಬಂದಿ ಬರ್ಕೆ ಠಾಣಾ ಸರಹದ್ದಿಗೆ ಸೇರಿದ ಬೊಕ್ಕಪಟ್ಣ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ಬಾಲಕನನ್ನು ಉಪಚರಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

No comments