ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್
ನವದೆಹಲಿ: ಭಾರತದ 14ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಆಯ್ಕೆಯಾಗಿದ್ದಾರೆ.
ಶೇಕಡ 65.65 ಮತಗಳೊಂದಿಗೆ ಕೋವಿಂದ್ ತಮ್ಮ ಪ್ರತಿಸ್ಪರ್ಧಿ ಮೀರಾ ಕುಮಾರ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಪಡೆದ ಮತ
ರಾಮನಾಥ ಕೋವಿಂದ್ 7,02,044
ಮೀರಾ ಕುಮಾರ್ 3,67,314
ಕರ್ನಾಟಕವನ್ನು ಹೊರತುಪಡಿಸಿದರೆ ಬಹುತೇಕ ರಾಜ್ಯಗಳಲ್ಲಿ ಕೋವಿಂದ್ ಅವರಿಗೆ ಹೆಚ್ಚು ಮತ ಬಿದ್ದಿದೆ. ಕೋವಿಂದ್ ಅವರ ಪರ 522, ಮೀರಾ ಕುಮಾರ್ ಅವರ ಪರ 225 ಮಂದಿ ಸಂಸದರು ಮತ ಚಲಾಯಿಸಿದ್ದಾರೆ. ಒಟ್ಟು 77 ಮತ ತಿರಸ್ಕೃತಗೊಂಡಿದ್ದು, ಇದರಲ್ಲಿ 21 ಸಂಸದರು ಸೇರಿದ್ದಾರೆ. ಒಟ್ಟು 5 ರಾಜ್ಯಗಳಲ್ಲಿ ಅಡ್ಡ ಮತದಾನವಾಗಿದೆ. ಕರ್ನಾಟಕದಲ್ಲಿ ಮೀರಾ ಕುಮಾರ್ ಅವರಿಗೆ 163 ಶಾಸಕರಿಂದ 21,353 ಮತಗಳು ಬಿದ್ದರೆ, ಕೋವಿಂದ್ ಅವರಿಗೆ 56 ಶಾಸಕರಿಂದ 7,336 ಮತಗಳು ಬಿದ್ದಿದೆ.
No comments