ಸೇನೆಯನ್ನು ಟೀಕಿಸುವ ರಾಜಕಾರಣಿಗಳ ಮರ್ಮಾಂಗ ಕತ್ತರಿಸಿ : ರಾಜ್‌ಕುಮಾರ್ ರಿನ್ವಾ
ನವದೆಹಲಿ :ಭಾರತೀಯ ಸೇನೆ ಬಗ್ಗೆ ಟೀಕೆ ಮಾಡುವ ರಾಜಕಾರಣಿಗಳ ಮರ್ಮಾಂಗ ಕತ್ತರಿಸಬೇಕೆಂದು ರಾಜಸ್ಥಾನದ ಸಚಿವ ರಾಜ್‌ಕುಮಾರ್ ರಿನ್ವಾ ಹೇಳಿದ್ದಾರೆ.
ಇತ್ತೀಚೆಗೆ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರನ್ನು ಕಾಂಗ್ರೆಸ್ ಮುಖಂಡ ಸಂದೀಪ್ ದಿಕ್ಷೀತ್ 'ಬೀದಿ ಗೂಂಡಾ' ಎಂದು ಕರೆದಿದ್ದರು. ಇದು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ದೀಕ್ಷಿತ್ ಬೇಷರತ್ ಕ್ಷಮೆ ಕೋರಿದ್ದರು.
ಯೋಧರು ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆಯನ್ನು ಟೀಕಿಸಿದ ಐದೇ ನಿಮಿಷದಲ್ಲಿ ಆ ರಾಜಕಾರಣಿಗಳ ಮರ್ಮಾಂಗ ಕತ್ತರಿಸಬೇಕೆಂದು ಅಂತಾ ರಾಜ್‌ಕುಮಾರ್ ರಿನ್ವಾ ಹೇಳಿದ್ದಾರೆ. ಅಲ್ಲದೇ, ಕಾನೂನಿನಲ್ಲೂ ಇಂತಹ ನೀತಿಯನ್ನು ಸೇರಿಸಬೇಕೆಂದು ರಿನ್ವಾ ಒತ್ತಾಯಿಸಿದ್ದಾರೆ.
No comments