ಮೋದಿ ಹಿಟ್ಲರ್ ಎಂದ ರಾಹುಲ್‌ಗೆ ಥ್ಯಾಂಕ್ಸ್ ಎಂದ ಇರಾನಿ
ನವದೆಹಲಿ : ಕಾಂಗ್ರೆಸ್‌ಗೆ ಕರಾಳ ಭವಿಷ್ಯ ಕಾಯುತ್ತಿದೆ, ನಮ್ಮ ದೇಶಕ್ಕಲ್ಲ. ಇದನ್ನೆಲ್ಲ ಮಾಡುತ್ತಿರುವುದಕ್ಕೆ ನಿಮಗೆ ಬಿಜೆಪಿಯಿಂದ ಹೃತ್ಪೂರ್ವಕ ಕೃತಜ್ಞತೆ ಎಂದು ಸಚಿವೆ ಸ್ಮೃತಿ ಇರಾನಿ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಹಿಟ್ಲರ್‌ಗೆ ಹೋಲಿಸಿದ ರಾಹುಲ್, ಸರಕಾರ ಬಡವರ ಮೇಲೆ ದೌರ್ಜನ್ಯ ನಡೆಸುವ ಜತೆಗೆ ಸುಳ್ಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದೆ, ಜನರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಮೋದಿ ಸರ್ವಾಧಿಕಾರಿಯಾಗಿದ್ದು, ಅವ ಸಲಹೆಗರರು ಕೂಡ ಧ್ವನಿಯೆತ್ತಲು ಹೆದರುತ್ತಾರೆ ಎಂದು ರಾಹುಲ್ ಬೆಂಗಳೂರಿನಲ್ಲಿ ಹೇಳಿದ್ದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಅಧಿಕಾರದಲ್ಲಿದ್ದ ನಾಜಿಗಳಂತೆ ವಾಸ್ತವಗಳನ್ನುತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ಕೇಂದ್ರ ಸಚಿವೆ ಇರಾನಿ ಈ ಕೃತಜ್ಞತಾ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವೆ ಇರಾನಿ, ನಿಮಗೆ 42 ವರ್ಷವಾದರೂ ಹಿಟ್ಲರ್‌ನಿಂದ ಪ್ರೇರಿತರಾದವರು ಯಾರು ಎಂಬುದು ಗೊತ್ತಿಲ್ಲ. ಪ್ರಜಾಪ್ರಭುತ್ವವನ್ನು ದಮನಿಸಿ ತುರ್ತು ಪರಿಸ್ಥಿತಿ ಹೇರಿದ್ದವರು ಯಾರು ಎಂದು ನಿಮ್ಮ ಪಕ್ಷದ ದಾಖಲೆ ನೋಡಿ ಎಂದು 1975ರಲ್ಲಿ ಇಂದಿರಾಗಾಂಧಿ ಅವರು ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸಿದ್ದಾರೆ.
ಆ ದಿನಗಳು ಭಾರತದ ಪಾಲಿಗೆ ಕರಾಳ ದಿನಗಳು. ಮಾಧ್ಯಮ ಸೆನ್ಸಾರ್ ಜತೆಗೆ ಭಿನ್ನಮತೀಯರನ್ನು ಜೈಲಗಟ್ಟಲಾಗಿತ್ತು ಎಂದು ಸಚಿವೆ ತಿಳಿಸಿದ್ದಾರೆ.
No comments