Breaking News

14 ವರ್ಷ ಜಪಾನ್‌ನಲ್ಲಿ ವಾಸವಿದ್ದ ಕುಟುಂಬ ಪ್ರಧಾನಿ ಮೋದಿ‌ಮೋಡಿಗೆ ಭಾರತಕ್ಕೆ ವಾಪಾಸ್ ಯಾಕೇ ಗೊತ್ತಾ ?



ಗುರ್ಗಾವ್ :  ಹದಿನಾಲ್ಕು ವರ್ಷ ಜಪಾನ್ ದೇಶದಲ್ಲಿ ವಾಸವಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಮರುಳಾಗಿ  ಭಾರತದ ಗುರ್ಗಾವ್ ನಲ್ಲಿ ವಾಸಿಸಲು
ಪ್ರಾರಂಭ ಮಾಡಿದ ಶೈಲಿ ಷಾ  ಕುಟುಂಬ.
ಭಾರತಕ್ಕೆ ಬಂದು ಕಳೆದ ನಾಲ್ಕು ವರ್ಷದಿಂದ ವಿನೂತನ ಸೇವೆ ಮಾಡಿಕೊಂಡು ಬಂದಿದ್ದಾರೆ.  ಭಾರತಕ್ಕೆ ಮರಳಿ ಬಂದ ಹೊಸದರಲ್ಲಿ ಶೈಲಿ ನಿತ್ಯ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಒಂದಷ್ಟು ಚಾಕೋಲೇಟ್ ಮತ್ತು ಬಿಸ್ಕತ್ ಪ್ಯಾಕೆಟ್ ಗಳನ್ನ ತೆಗೆದುಕೊಂಡು ಹೋಗುತ್ತಿದ್ದರು ಮತ್ತು ಅದನ್ನ ರಸ್ತೆಯಲ್ಲಿನ ಅನಾಥ ಮಕ್ಕಳಿಗೆ ಹಂಚುತ್ತಿದ್ದರು .

 ಹೀಗೆ ಬೇಸಿಗೆಯಲ್ಲಿ ಒಂದು ದಿನ ಬಿಸ್ಕತ್ ಪ್ಯಾಕೆಟ್ ಒಬ್ಬ ಹುಡುಗನಿಗೆ ಕೊಡಲು ಹೋದಾಗ ಆತ ಬಿಸ್ಕತ್ ಪ್ಯಾಕ್ ನಿರಾಕರಿಸುತ್ತಾನೆ . ಬದಲಿಗೆ ಶೈಲಿ ಅವರ ಕೈಲಿದ್ದ ನೀರಿನ ಬಾಟಲ್ ಕೊಡುವಂತೆ ಕೇಳುತ್ತಾನೆ . ಶೈಲಿ ಕ್ಷಣವೂ ಯೋಚಿಸದೆ ನೀರಿನ ಬಾಟಲ್ ಆತನಿಗೆ ಕೊಡುತ್ತಾರೆ . ಬೇಸಿಗೆಯ ಝಳಕ್ಕೆ ಬೆಂಡಾಗಿದ್ದ ಆ ಹುಡುಗ ನೀರು ಕುಡಿದ ಮೇಲಿನ ಸಂತೃಪ್ತ ಭಾವ ಶೈಲಿಯ ಜೀವನ ಬದಲಾಯಿಸುತ್ತೆ.

ಜಪಾನ್ ನಲ್ಲಿ ಹದಿನಾಲ್ಕು ವರ್ಷ ಇದ್ದೂ ಅಲ್ಲಿನ ಸಂಸ್ಕೃತಿಯಲ್ಲಿ ಪೂರ್ಣ ಒಂದಾಗಲು ಆಗಲಿಲ್ಲ . ಸೋಶಿಯಲ್ ಲೈಫ್ ಎನ್ನವುದು ಅಷ್ಟಕಷ್ಟೇ . ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಮೈಗ್ರೇಟ್ ಮಾಡಿದವರ ಕಥೆ ಇಷ್ಟು  ಹೀಗಾಗಿ ಇಲ್ಲಿರುವ ಜಪಾನೀ ಮಹಿಳೆಯರಿಗೆ ಕುಕಿಂಗ್ ಕ್ಲಾಸ್ ನೆಡೆಸುತ್ತಾ  ಮತ್ತು ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆಯಲು ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿರುವ ಶೈನಿ ತನ್ನ ವಲಯದಲ್ಲಿ ಮುಕ್ಕಾಲು ಪಾಲು ಜನ ಮಿನರಲ್ ವಾಟರ್ ಉಪೋಯೋಗಿಸುವುದ ನೋಡುತ್ತಾರೆ . ಮುಂದಿನದು ಒಂದು ರೀತಿಯ ತಪಸ್ಸು ಎಲ್ಲರ ಮನೆಯಿಂದ ಖಾಲಿ ಬಾಟಲ್ ಶೇಖರಿಸುವುದು ಮತ್ತು ಅದನ್ನ ಶುದ್ಧ ಗೊಳಿಸಿ ಕುಡಿಯಲು ಯೋಗ್ಯ ನೀರು ತುಂಬಿಸಿ ರಸ್ತೆ ಬದಿಯ ಜನರಿಗೆ ಅದನ್ನ ನಿಜವಾಗಿ ಬೇಕಾಗಿರುವರಿಗೆ ತಲುಪಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ .

ನರೇಂದ್ರ ಮೋದಿಯವರ ಮನ್ ಕಿ ಬಾತ್ ಕೇಳಿದ ನಂತರ ಇದನ್ನ ಇನ್ನಷ್ಟು ಶ್ರದ್ದೆ ಯಿಂದ ಮಾಡಲು ನಿರ್ಧರಿಸಿ ಈ ಕಾರ್ಯಕ್ಕೆ abcd ಅಂದರೆ ಎನಿ ಬಡಿ ಕ್ಯಾನ್ ಡೊ ಎನ್ನುವ ಹೆಸರಿಡುತ್ತಾರೆ . ಹೌದು ಯಾರು ಬೇಕಾದರೂ ಮಾಡಬಹದು ಅದಕ್ಕೆ ಬೇಕಾಗಿರುವುದು ಮನಸ್ಸು . ಹಣ ತಾನಾಗೇ ಹಿಂಬಾಲಿಸುತ್ತದೆ . ಇವರ ಯಜ್ಞಕ್ಕೆ ಹಲವು ಕಾಣದ ಕೈಗಳು ಸಹಾಯ ಹಸ್ತ ನೀಡುತ್ತಿವೆ .

ಬೇಸಿಗೆಯಲ್ಲಿ ಅಸಹಾಯಕ ಮಂದಿ ಕಂಡರೆ ಅವರ ಕೈಗೊಂದು ಬಾಟಲ್ ನೀರು ಕೊಡಿ ಎನ್ನುವ ಮನವಿ ಶೈಲಿ ಅವರದ್ದು .

ಅದು ಸರಿ ಇಲ್ಲ ಇದು ಸರಿ ಇಲ್ಲ ಎಂದು ಪಟ್ಟಿ ಮಾಡುವುದು ಇತರರ ದೂಷಿಸುವುದು ಬಹಳ ಸಲುಭ . ಬದಲಾವಣೆಗೆ ಒಂದು ಸಣ್ಣ ಬದಲಾವಣೆ ನಮ್ಮಲ್ಲಿ ಬರಬೇಕೆಲ್ಲವೇ ?
ಎಲ್ಲವನ್ನೂ ರಾಜಕೀಯ ನಾಯಕರೆ ಮಾಡಬೇಕೆಂಬುದು ಕೂಎ ತಪ್ಪು ಕೆಲವೊಮ್ಮೆ ನಾವಾಗಿಯೆ ಇಂತಹ ಕೆಲಸಕ್ಕೆ ಕೈಹಾಕಿದ್ದರೆ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾದ್ಯ ಹಾಗೂ ಅನ್ನ ಕೊಟ್ಟ ದೇಶದ ಯುಣ ತೀರಿಸಲು ಸಾದ್ಯ



No comments