51 ವರ್ಷ ಪ್ರಾಯದ ಮಹಿಳೆ ಮೇಲೆ ಕಾಂಗ್ರೆಸ್ ಶಾಸಕನಿಂದ ಅತ್ಯಾಚಾರ
ತಿರುವನಂತಪುರಂ: ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ಅಡಿಯಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕನನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ.
51 ವರ್ಷದ ಮಹಿಳೆಯೊಬ್ಬರ ದೂರಿನಾಧಾರದಲ್ಲಿ ಕೋಲಂ ಶಾಸಕ ವಿನ್ಸೆಂಟ್ ವಿರುದ್ಧ ಪೊಲೀಸರು ಶುಕ್ರವಾರ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.ಪೊಲೀಸರು ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಆಕೆ ಹಾಗೂ ಆಕೆಯ ಹತ್ತಿರದ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ವಿನ್ಸೆಂಟ್ ಬಂಧಿಸಲು ಪೊಲೀಸರು ವಿಧಾನಸಭೆ ಸಭಾಪತಿಯ ಅನುಮತಿ ಕೋರಿದ್ದರು. ಆದರೆ ಶಾಸಕನನ್ನು ಬಂಧಿಸಲು ಅನುಮತಿಯ ಅಗತ್ಯವಿಲ್ಲವೆಂಬ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ವಿನ್ಸೆಂಟ್’ನನ್ನು ಬಂಧಿಸಿದ್ದಾರೆ.
ವಿಧಾನಸಭೆ ಕಲಾಪಗಳಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ ಹಾಗೂ ಶಾಸಕರ ಭವನದಲ್ಲಿ ತನಿಖೆ ನಡೆಸಬೇಕಾದ ಸಂದರ್ಭದಲ್ಲಿ ಮಾತ್ರ ಸಭಾಪತಿ ಅನುಮತಿ ಪಡೆಯಬೇಕಾಗಿದೆ ದು ಹೇಳಲಾಗಿದೆ.
ಶಾಸಕನ ಬೆಂಬಲಕ್ಕೆ ಬಾರದ ಕಾಂಗ್ರೆಸ್:
ಮೇಲ್ನೋಟಕ್ಕೆ ವಿನ್ಸೆಂಟ್ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ, ತನ್ನ ಶಾಸಕನನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷವು ಕೂಡಾ ಹಿಂದೇಟು ಹಾಕಿದೆ ಎನ್ನಲಾಗಿದೆ. ಆರೋಪವನ್ನು ಪುಷ್ಟೀಕರಿಸುವಂತೆ, ವಿನ್ಸೆಂಟ್ ಹಾಗೂ ಮಹಿಳೆ ನಡುವೆ ನಡೆದ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್ ಪೊಲೀಸರಿಗೆ ಲಭಿಸಿದೆ ಎನ್ನಲಾಗಿದೆ.
Source
Source
No comments