Breaking News

ಟೊಮ್ಯಾಟೋ ಕಾವಲಿಗೆ ನಿಂತ ಭದ್ರತಾ ಸಿಬ್ಬಂದಿ

  ಭೋಪಾಲ್:  ವರ್ಷದ ಆರಂಭದಲ್ಲಿ ಮಧ್ಯ ಪ್ರದೇಶದ ರೈತರು ಬೆಲೆ ಕುಸಿತದಿಂದ ಕಂಗೆಟ್ಟು ತಾವು ಬೆಳೆದ ಟೊಮ್ಯಾಟೋಗಳನ್ನು ರಸ್ತೆಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭ ಟೊಮ್ಯಾಟೋ ಬೆಲೆ 1  ರೂ.ಆಗಿತ್ತು ಆದರೆ ಇದೀಗ ಟೊಮ್ಯಾಟೋ ತರಕಾರಿಗಳಲ್ಲೇ ಅತಿ ದುಬಾರಿ ಎನಿಸಿಕೊಂಡಿದೆ. ಹೀಗಾಗಿ ಇಂದೋರ್ ನ ದೇವಿ ಅಹಿಲ್ಯಾ ಭಾಯ್ ಹೋಲ್ಕರ್ ತರಕಾರಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗಳು ಕಳ್ಳತನವಾಗದಂತೆ ಕಾಪಾಡಲು ಸಶಸ್ತ್ರ ಭದ್ರತಾ ಸಿಬ್ಬಂದಿ  ಕಾವಲು ಕಾಯುವ ಪರಿಸ್ಥಿತಿ ಬಂದಿದೆ .
 ಮೇಲಿನ ಚಿತ್ರದಲ್ಲಿ ಟ್ರಕ್  ಒಂದನ್ನು ಸುತ್ತುವರಿದ ಸಶಸ್ತ್ರ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಆದರೆ ಕಾಯುತ್ತಿರುವ  ಆ ಟ್ರಕ್ ನಲ್ಲಿ ಅಮೂಲ್ಯವಾದ ವಜ್ರಗಳೋ, ಚಿನ್ನಾಭರಣವೋ ಅಥವಾ ಹಣದ ರಾಶಿಯೋ ಇಲ್ಲ. ಬದಲಾಗಿ, ಅದರಲ್ಲಿರುವುದು ಟೊಮ್ಯಾಟೋ ಎಂಬುವುದು ನಂಬಲು ಅಸಾಧ್ಯ ವಾದರು ಸತ್ಯ .

No comments