ಶತಕ ಬಾರಿಸಿದ ಹರ್ಮನ್ ಪ್ರೀತ್ ಕೌರ್ ಗೆ ಪಂಜಾಬ್ ಸರಕಾರ ಕೊಟ್ಟ ಉಡುಗೊರೆ ಏನು ಗೊತ್ತೆ
ಚಂಡಿಗಡ: ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 115 ಎಸೆತಗಳಲ್ಲಿ ಬರೋಬ್ಬರಿ ಅಜೇಯ 171ರನ್ ಗಳಿಸಿದ್ದ ಕೌರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ನಿಟ್ಟಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ 5ಲಕ್ಷ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಐಸಿಸಿ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಹರ್ಮನ್ ಪ್ರೀತ್ ಕೌರ್‌ಗೆ ಮೇಲಿಂದ ಮೇಲೆ ಉಡುಗೊರೆಗಳು ಬರುತ್ತಿವೆ.
ಸದ್ಯ ಪಂಜಾಬ್ ಮುಖ್ಯಮಂತ್ರಿ ಕೌರ್‌ಗೆ ಈ ಬಹುಮಾನ ಘೋಷಣೆ ಮಾಡಿದ್ದಾರೆ.
No comments