Breaking News

ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟು ಬಿಡಿ RSS ಮುಸ್ಲಿಂ ಘಟಕದಿಂದ ಪಾಕ್ ಗೆ ಎಚ್ಚರಿಕೆ


   ನವದೆಹಲಿ: ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಬಿಟ್ಟುಬಿಡಲು ಆಗ್ರಹಿಸಿ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್)ದ ಮುಸ್ಲಿಂ ಘಟಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಆಂಧೋಲವನ್ನು ನಡೆಸಲು ತೀರ್ಮಾನಿಸಿದೆ. 
ಆಗಸ್ಟ್ 9ರಂದು ಪಾಕಿಸ್ತಾನ ವಿರುದ್ಧ ಬೃಹತ್ ಆಂಧೋಲನ ನಡೆಸಲಾಗುತ್ತದೆ ಈ ಆಂಧೋಲನದಲ್ಲಿ ಪಕ್ಷ ಬೇದ ಮರೆತು ಎಲ್ಲಾ ರಾಜಕೀಯ ಪಕ್ಷಗಳು ಭಾಗವಹಿಸಬೇಕು ಎಂದು ಆರ್‌ಎಸ್‌ಎಸ್ ಪ್ರಚಾರಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ. 
ಕಾಶ್ಮೀರವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪಾಕಿಸ್ತಾನ ವಿರುದ್ಧ ಧ್ವನಿ ಎತ್ತಲು ಆರ್‌ಎಸ್‌ಎಸ್ ಮುಸ್ಲಿಂ ಘಟಕ ಮುಂದಾಗಿದೆ ಎಂದು ಕುಮಾರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 
ಇದು ಆಂಧೋಲನ ಯಶಸ್ವಿಯಾದರೆ ಕಾಶ್ಮೀರದಲ್ಲಿ ಒಂದು ಪ್ರಮುಖ ಬದಲಾವಣೆ ನಡೆಯಲಿದೆ ಎಂದು ನಿರೀಕ್ಷಿಸಬಹುದು ಎಂಬ ಭರವಸೆಯನ್ನು ಇಂದ್ರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ. 


Source/online

No comments