Breaking News

ಐಸಿಸ್ ಉಗ್ರರಷ್ಟೆ ಡೆಂಜರ್ ಅಂತೆ ನಮ್ಮ ದೇಶದ ಕೆಂಪು ಉಗ್ರರು ಬೆಚ್ಚಿ ಬಿಸಿದ ಆ ವರದಿಯಲ್ಲಿ ಏನಿದೆ ?



ನವದೆಹಲಿ(ಜು.23): ವಿಶ್ವದಾದ್ಯಂತ ನಡುಕ ಹುಟ್ಟಿಸಿರುವ ಬೋಕೋ ಹರಾಂ ಉಗ್ರಗಾಮಿ ಸಂಘಟನೆಗಿಂತ, ಭಾರತದ ವಿವಿಧ ರಾಜ್ಯಗಳಲ್ಲಿ ರಕ್ತದೋಕುಳಿ ಹರಿಸುತ್ತಿರುವ ಮಾವೋವಾದಿ ನಕ್ಸಲ್ ಸಂಘಟನೆ ವಿಶ್ವದ ಮೂರನೇ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಸಂಘಟನೆಯಾಗಿದೆ ಎಂದು ಅಮೆರಿಕದ ವರದಿ ತಿಳಿಸಿದೆ.
ಇರಾಕ್ ಹಾಗೂ ಸಿರಿಯಾದಲ್ಲಿ ರುಂಡ ಚೆಂಡಾಡಿದ ಐಸಿಸ್ ಪ್ರಥಮ ಸ್ಥಾನದಲ್ಲಿದ್ದರೆ, ಒಸಾಮ ಬಿನ್ ಲಾಡೆನ್ ಹತ್ಯೆಯ ಬಳಿಕ ಈಗ ತುಸು ಮಂಕಾಗಿರುವ ತಾಲಿಬಾನ್ ಎರಡನೇ ಸ್ಥಾನದಲ್ಲಿವೆ. ಇನ್ನು ನೈಜೀರಿಯಾದಲ್ಲಿ ರಕ್ತದ ಕೋಡಿ ಹರಿಸಿದ ಬೋಕೋ ಹರಾಂ ಸಂಘಟನೆ ನಾಲ್ಕನೇ ಸ್ಥಾನದಲ್ಲಿದೆ.
2016ರಲ್ಲಿ ಭಾರತದಲ್ಲಿ ನಕ್ಸಲರು 336 ದಾಳಿಗಳನ್ನು ನಡೆಸಿ, 174 ಮಂದಿಯನ್ನು ಕೊಂದಿದ್ದಾರೆ. 141 ಮಂದಿಯನ್ನು ಗಾಯಗೊಳಿಸಿದ್ದಾರೆ ಎಂದು ವರದಿಯೊಂದರಲ್ಲಿ ತಿಳಿಸಲಾಗಿದೆ.
'ದೇಶದಲ್ಲಿ ನಡೆಯುತ್ತಿರುವ ಮೂರು ದಾಳಿಗಳ ಪೈಕಿ ಎರಡು ದಾಳಿಗಳು ನಕ್ಸಲರದ್ದಾಗಿರುತ್ತವೆ' ಎಂದ ಆತಂಕಕಾರಿ ಅಂಶವನ್ನು ಅಮೆರಿಕಾದ ವರದಿ ಹೊರಹಾಕಿದೆ. ಅಲ್ಲದೇ ದೇಶದಲ್ಲಿ ಸುಮಾರು 52 ವಿವಿಧ ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿವೆ ಎಂದು ತಿಳಿಸಲಾಗಿದೆ.
2016ರಲ್ಲಿ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ, ಛತ್ತೀಸ್'ಗರ್, ಮಣಿಪುರ ಹಾಗೂ ಝಾರ್ಖಂಡ್'ನಲ್ಲಿ ಹೆಚ್ಚಾಗಿ ಉಗ್ರಗಾಮಿ ದಾಳಿ ನಡೆದಿದೆ
Source/Suvarna news

No comments