Breaking News

ಹಿರಿಯ ನಾಗರಿಕನ ಮೇಲೆ ಹೆಲ್ಮೆಟ್ನಿಂದ ಹೊಡೆದ ಟ್ರಾಫಿಕ್ ಪೋಲೀಸ್ ಅಮಾನತು    


ಬೆಂಗಳೂರು : ಭಾನುವಾರ ವಿಜಯನಗರದಲ್ಲಿ ಕುಲ್ಲಕ್ಷ ಕಾರಣಕ್ಕೆ ಹಿರಿಯ ನಾಗರಿಕನನ್ನು ಹಲ್ಲೆ ಮಾಡಿದ ಹಿರಿಯ ಟ್ರಾಫಿಕ್ ಪೋಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧಿಸಿದಂತೆ ನಾಗರಾಭಿಯ ನಿವಾಸಿ ರಾಮಕೃಷ್ಣ (65) ಅವರು ನೀಡಿದ ದೂರಿನ ಮೇರೆಗೆ ಡಿಸಿಪಿ ಶೋಭಾ ರಾಣಿ ವಿಜಯನಗರ ಸಂಚಾರಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಜಯರಾಮ್ ಅವರನ್ನು ಅಮಾನತುಗೊಳಿಸಿ,  ಹೆಚ್ಚಿನ ತನಿಖೆಗೆ ಆದೇಶಿಸಿದ್ದಾರೆ.
ಘಟನೆ ವಿವರ
ವಿಜಯನಗರ ವಾಟರ್ ಟ್ಯಾಂಕ್ ಬಳಿ
 1.30ರ ಸುಮಾರಿಗೆ ಪೋಲಿಸ್ ಪೇದೆ ಜಯರಾಮ್ ತನ್ನ ಬೈಕ್ ನಲ್ಲಿ ಪೋಲಿಸ್ ಠಾಣೆಗೆ ಸವಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ, ರಾಮಕೃಷ್ಣ ಅವರ ಕಾರು ಸಿಗ್ನಲ್ ಬಳಿ    ಕೆಂಪು ಬೆಳಕು ಇದ್ದ ಕಾರಣ ನಿಲ್ಲಿಸಿದ್ದರು.ಜಯರಾಮ್ ಯ ಟರ್ನ್ ಹೊಡೆಯುವ ಸಲುವಾಗಿ ಹಲವು ಬಾರಿ ಹಾರ್ನ್ ಮಾಡಿದ್ದು ಇದರಿಂದ ಬೇಸತ್ತ ರಾಮಕೃಷ್ಣ ಅವರು ಜಯರಾಂ ಜೊತೆ ವಾಗ್ವಾದಕ್ಕಿಳಿದಿದ್ದರು  ಈ ಸಂದರ್ಭ ಜಯರಾಂ ರೊಚ್ಚಿಗೆದ್ದು ಹೆಲ್ಮೆಟ್ ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಾಳು ರಾಮಕೃಷ್ಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.

 ಹಿರಿಯ ನಾಗರಿಕನ ಮೇಲೆ ಹಲ್ಲೆ ನಡೆಸಿದನ್ನು ಖಂಡಿಸಿ ಸ್ಥಳದಲ್ಲಿ ಜಯರಾಮ್ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು ಮತ್ತು ಘಟನಾ ಸ್ಥಳಕ್ಕೆ ಭೇಟಿ ನೀಡಿದ DCP  ಜಯರಾಮ್ ವಿರುದ್ಧ ಕ್ರಮ ಕೈಗೊಳ್ಳಲಾಗುವ  ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು ಎಂದು ತಿಳಿದು ಬಂದಿದೆ. 

No comments