Breaking News

Rss ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಯತ್ನ


ಬಂಟ್ವಾಳ : ಸಂಘಪರಿವಾರದ ಕಾರ್ಯಕರ್ತನ ಮೇಲೆ ಆರು ಜನರ ತಂಡವೊಂದು ತಲಾವಾರುಗಳಿಂದ ದಾಳಿ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಲಾಂಡ್ರಿ ಉದ್ಯಮಿ ತನಿಯಪ್ಪ ಅವರ ಮಗ ಶರತ್ ಮಡಿವಾಳ ( 27) ಎಂಬುವವರ ಮೇಲೆ ದಾಳಿ ನಡೆದಿದ್ದು ದಾಳಿ ನಡೆಯುವ ಸಂದರ್ಭದಲ್ಲಿ ಅಂಗಡಿಯಲ್ಲಿ ಇದ್ದು ದುಷ್ಕರ್ಮಿಗಳು ಅಂಗಡಿಗೆ ನೂಗ್ಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ .
ಹಲ್ಲೆಗೆ ಒಳಗಾದ ಶರತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಮಂಗಳೂರಿನ ಖಾಸಗಿ
 ಆಸ್ಪತ್ರೆಗೆ ದಾಖಲಿಸಿದ್ದಾರೆ .

ಸದ್ಯ ಸ್ಥಳದಲ್ಲಿ ನೂರಾರು ಮಂದಿ ಜಮೆಯಾಗಿದ್ದಾರೆ.
ಇದು ಕೊಮು ಹಿಂಸಾಚಾರಕ್ಕೆ ನಡೆದ ಕೃತ್ಯ ಎಂದು ಸ್ಥಳಿಯರು ಕಿಡಿಕಾರುತ್ತಾ ಇದ್ದಾರೆ .

ಸ್ಥಳಕ್ಕೆ ಪೋಲಿಸರು ಬೇಟಿ ನೀಡಿದ್ದು‌ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಂಡಿದ್ದಾರೆ   ಪರಿಸ್ಥಿತಿ ಬುದಿ ಮುಚ್ಚಿದ ಕೆಂಡದಂತಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ ಎಂದು ತಿಳಿದು ಬಂದಿದೆ

No comments