ಮೋಸ್ಟ ವಾಂಟೆಡ್ ಉಗ್ರನ ಬಂಧನ
ಲಕ್ನೋ: ಜುಲೈ 8 19993ರಲ್ಲಿ ಮುಂಬೈ ಸರಣಿ ಸ್ಪೋಟದ ರುವಾರಿ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಕಾದಿರ್ ಅಹ್ಮದ್ ದಶಕಗಳ ಬಳಿಕ ಎಟಿಎಸ್ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಶನಿವಾರ ಬಿಜ್ನೋರ್ ನಲ್ಲಿ ಬಂಧಿಸಲಾಗಿದೆ.
ಅಹ್ಮದ್ ಮುಂಬೈ ಸರಣಿ ಬಾಂಬ್ ಸ್ಟೋಟದ ಪ್ರಮುಖ ರುವಾರಿಯಾಗಿದ್ದು ಸ್ಪೋಟದ ಬಳಿಕ ತಲೆ ಮರೆಸಿಕೊಂಡಿದ್ದು ಉಗ್ರ ಟೈಗರ್ ಮೆಮನ್ ಗೆ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳ ಸರಬರಾಜು ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ವರದಿಯಾಗಿದೆ .
ಸದ್ಯ ಈತನನ್ನು ಹೆಚ್ಚಿನ ವಿಚಾರಣೆಗೆ ಆತನ ತವರಾದ ಗುಜರಾತ್ ಗೆ ಕರೆದುಕೊಂಡು ಹೊಗಲಾಗುವುದು ಎಂದು ಉತ್ತರ ಪ್ರದೇಶ ಎಟಿಎಸ್ ಐಜಿ ಅಸೀಂ ಅರುಣ್ ತಿಳಿಸಿದ್ದಾರೆ
No comments