Breaking News

ಶಾದಿಭಾಗ್ಯ’ ಮಾದರಿ ಯೋಜನೆಗೆ ಕೇಂದ್ರ ಸಿದ್ಧತೆ


ನವದೆಹಲಿ :  ಕರ್ನಾಟಕದ ಕಾಂಗ್ರೆಸ್  ಸರ್ಕಾರದ ‘ಶಾದಿ ಭಾಗ್ಯ’ ಹಾಗೂ ತೆಲಾಂಗಣದ ‘ಶಾದಿ ಮುಬಾರಕ್’ ಯೋಜನೆಯ ರೀತಿಯೇ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಯೋಜನೆಯೊಂದನ್ನು ತರಲು ಮುಂದಾಗಿದೆ.
ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ  ವಿದ್ಯಾರ್ಥಿವೇತನಕ್ಕೆ ಅರ್ಹರಾದ ಅಲ್ಪಸಂಖ್ಯಾತ ಸಮುದಾಯದ ಹೆಣ್ಣಮಕ್ಕಳ ವಿವಾಹಕ್ಕೆ ‘ಶಾದಿ ಶಗುನ್’ ಹೆಸರಲ್ಲಿ ರೂ. 51,000 ಹಣಕಾಸು ನೆರವು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

No comments