Breaking News

ಯುಪಿಎ ಸರ್ಕಾರದ ಯೋಜನೆಗಳ ಹೆಸರುಗಳನ್ನು ಬದಲಿ­ಸಿ ಸುಳ್ಳು ಹೇಳುವ ಮೋದಿ : ಸಿದ್ದರಾಮಯ್ಯಮೈಸೂರು: ಯುಪಿಎ ಸರ್ಕಾರದ ಅನೇಕ ಯೋಜನೆಗಳ ಹೆಸರುಗಳನ್ನು ಬದಲಿ­ಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಯೋಜನೆಗಳೆಂದು ಬಿಂಬಿಸುತ್ತಿದ್ದಾರೆ. ಅಲ್ಲದೇ, ಈ ಯೋಜನೆಗಳಿಗೆ ನೀಡಬೇಕಾದ ಕೇಂದ್ರ ಸರ್ಕಾರದ ಪಾಲನ್ನೂ ಸರಿಯಾಗಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಾಣ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜೀವ ಗಾಂಧಿ ಆವಾಸ್ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳ ಹೆಸರುಗಳನ್ನು ಪ್ರಧಾನಿ ಮೋದಿ ಬದಲಾಯಿಸಿದ್ದಾರೆ. ಫಸಲ್‌ ಬಿಮಾ ಯೋಜನೆಯೂ ಮೂಲತಃ ಯುಪಿಎ ಸರ್ಕಾರದ್ದೇ. ಈಗ ಇವನ್ನೆಲ್ಲ ತಮ್ಮದೇ ಯೋಜನೆಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.


No comments