Breaking News

ಫೇಸ್‍ಬುಕ್ ನಲ್ಲಿ ಪ್ರಧಾನಿ ಅವಹೇಳನ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು


ಕೊಪ್ಪಳ:  ಫೇಸ್ ಬುಕ್‍ನಲ್ಲಿ ನರೇಂದ್ರ ಮೋದಿ ಅವರ ಅಶ್ಲೀಲ ಫೋಟೋ ಶೇರ್ ಮಾಡಿ, ದೇಶದ ಪ್ರಧಾನಿಗೆ ಅವಮಾನ ಮಾಡಿರೋ ಬೆಳಕಿಗೆ ಬಂದಿದೆ.ಘಟನೆ ಸಂಬಂಧ ಬಿಜೆಪಿ ಗಂಗಾವತಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಮಾಲಿಪಾಟೀಲ್ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರಟಗಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಗುಡೂರು ಗ್ರಾಮದ ತಿಪ್ಪಣ್ಣ ಗುಡೂರು ತನ್ನ ಫೇಸ್ಬುಕ್ ನಲ್ಲಿ ಅಶ್ಲೀಲ ಫೋಟೋ ಶೇರ್ ಮಾಡಿದ್ದ. ಜೊತೆಗೆ ಫೇಸ್ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಲೆಯನ್ನು ಬೆತ್ತಲಾದ ಫೋಟೋದೊಂದಿಗೆ ಎಡಿಟ್ ಮಾಡಿ ಹಲವರಿಗೆ ಟ್ಯಾಗ್ ಮಾಡಿದ್ದನು. ಅಶ್ಲೀಲ ಫೋಟೋದೊಂದಿಗೆ ಬೇರೆ ಭಾಷೆಯಲ್ಲಿ ಅಸಹ್ಯಕರ ಸಂದೇಶ ಇರುವ ಪೋಸ್ಟ್ ಶೇರ್ ಮಾಡಿದ್ದನು.

No comments