Breaking News

ಉಳ್ಳಾಲ ಆರ್ ಎಸ್ ಎಸ್ ಕಾರ್ಯಕರ್ತ ಚಿರಂಜೀವಿ ಮೇಲೆ ತಲಾವಾರು ದಾಳಿಮಂಗಳೂರು: ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಯುವಕನೋರ್ವನ ಮೇಲೆ ಕಪ್ಪು ಪಲ್ಸರ್ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ತಲವಾರು ದಾಳಿ ನಡೆಸಿದ್ದು, ಗಾಯಗೊಂಡ ಯುವಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಜೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ರಾಣಿಪುರದಲ್ಲಿ ನಡೆದಿದೆ.

ಅಂಬ್ಲಮೊಗರು ಗ್ರಾಮದ ಕ್ವಾಟ್ರಗುತ್ತು ನಿವಾಸಿ ಚಿರಂಜೀವಿ(24)ತಲವಾರು ದಾಳಿಗೊಳಗಾದ ಯುವಕ. ಚಿರಂಜೀವಿ ಚಿರಂಜೀವಿ  ಆರ್ ಎಸ್ ಎಸ್  ಕಾರ್ಯಕರ್ತನೆಂದು ತಿಳಿದುಬಂದಿದ್ದು ಸಂಜೆ ಕುತ್ತಾರಿನಿಂದ ಕ್ವಾಟ್ರಗುತ್ತುವಿನ ಮನೆ ಕಡೆ ತೆರಳುತ್ತಿದ್ದ ವೇಳೆ ಕಪ್ಪು ಪಲ್ಸರ್ ಬೈಕಲ್ಲಿ ಹಿಂಬಾಲಿಸಿ ಬಂದ ಮೂರು ಮಂದಿ ಮತಾಂಧರ ಗುಂಪು ಚಿರಂಜೀವಿ ತಲೆಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.
ತಲವಾರು ದಾಳಿಗೊಳಗಾದ ಚಿರಂಜೀವಿ( 24) ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಪರಿಸ್ಥಿತಿ ಉದ್ವಿಗ್ನ ಗೊಂಡಿದ್ದು ಬಿಗಿ ಪೋಲಿಸ್ ಬಂದೊಬಸ್ತ್ ಮಾಡಲಾಗಿದೆ

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

No comments