Breaking News

ನಿಷೇಧಾಜ್ಞೆ ನಡುವೆ ವಾಣಿಜ್ಯ ಕಟ್ಟಡದ ಮೂರನೇ ಮಹಡಿಯಲ್ಲಿ ಕಲ್ಲು ಶೇಖರಣೆ ಗೊಂಡಿದ್ದು ಹೇಗೆ ?



ಮಂಗಳೂರು : RSS ಕಾರ್ಯಕರ್ತ ಶರತ್ ಅವರ ಪಾರ್ಥಿವ ಶರೀರವನ್ನು ಇಂದು ಎಜೆ ಆಸ್ಪತ್ರೆಯಿಂದ ಮೃತರ ಸ್ವಗ್ರಾಮಕ್ಕೆ ಮೆರವಣಿಗೆ ಮೂಲಕ ತೆಗೆದು ಕೊಂಡು ಹೋಗುವ ಸಂದರ್ಭ ಕೈಕಂಬ ಬಳಿ ಬರುತ್ತಿದ್ದಂತೆ ಅಕ್ಕಪಕ್ಕದ ಕಟ್ಟಡಗಳಲ್ಲಿ ಅವಿತಿದ್ದ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದಾರೆ.



ಎಜೆ ಆಸ್ಪತ್ರೆಯಿಂದ ಶಾಂತಿಯುತವಾಗಿ ಮೆರವಣಿಗೆಯ ಮೂಲಕ ಬಾರಿ ಜನಸ್ತೋಮದ ನಡುವೆ ಶರತ್ ಪಾರ್ಥಿವ ಶರೀರ ಬರುತ್ತಿತ್ತು, ಕೈಕಂಬ ಬಳಿ ಮೆರವಣಿಗೆ ಬರುತ್ತಿದ್ದಂತೆ ಅಕ್ಕಪಕ್ಕದ ಕಟ್ಟಡಗಳಲ್ಲಿ ಅವಿತಿದ್ದ ಮುಸ್ಲಿಂ ಯುವಕರ ಗುಂಪು ಏಕಾಏಕಿ ಜನರ ಮೇಲೆ ಕಲ್ಲೆಸೆದಿದೆ. ಕಟ್ಟಡದ ಮೂರನೇ ಮಹಡಿಯಿಂದ ಕಲ್ಲುಗಳು ತೂರಿಬಂದಿದ್ದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅನೇಕ ಜನರು ಕಲ್ಲೇಟಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾವಿರಕ್ಕೂ ಹೆಚ್ಚು ಪೋಲೀಸರನ್ನು ಭದ್ರತೆಗೆ ನಿಯೋಜಿಸಿದ್ದರು ಕಟ್ಟಡದ ಮೂರನೇ ಮಹಡಿಯಲ್ಲಿ ಕಲ್ಲು ಶೇಖರಣೆ ಮಾಡಲು ಯುವಕರಿಗೆ ಹೇಗೆ ಸಾಧ್ಯವಾಯಿತು.? ಪೋಲೀಸರು ಆ ಸಮಯದಲ್ಲಿ ಏನು ಮಾಡುತ್ತಿದ್ದರು.? ಕಲ್ಲಡ್ಕದಂತೆ ಈ ಬಾರಿಯೂ ಪೋಲೀಸರ ಕೈ ಕಟ್ಟಿಹಾಕಲಾಗಿತ್ತೇ ಎಂದು ಘಟನೆಗೆ ಸಾಕ್ಷಿಯಾದ ಜನರು ಸುದ್ದಿ24x7 ಜೊತೆ ನಡೆದ ಘಟನೆಯನ್ನು ವಿವರಿಸುವಾಗ ಸಂಶಯ ವ್ಯಕ್ತ ಪಡಿಸಿದರು.

ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಈಗಾಗಲೆ 9ಜನರನ್ನು ಪೋಲೀಸರು ಬಂಧಿಸಿದ್ದಾರೆ,ಹಲವು ವಾಹನಗಳು ಜಖಂಗೊಂಡಿದೆ. ಪೋಲೀಸರು ಹರಸಾಹಸ ಪಟ್ಟು ಪರಿಸ್ಥಿತಿಯನ್ನು ಹತೋಟಿಗೆ ತಂದರು.

No comments