Breaking News

ಶಾಂತಿಯುತವಾಗಿ ಸಾಗುತ್ತಿದ್ದ ಶರತ್ ಅಂತಿಮ ಯಾತ್ರೆ ಮೇಲೆ ಮತಾಂಧರಿಂದ ಕಲ್ಲುತೂರಾಟ.

ಮಂಗಳೂರು : ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ಮೂರು ದಿನಗಳ ಕಾಲ ಎಜೆ ಆಸ್ಫತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಿ ಮೃತರಾದ RSS ಕಾರ್ಯಕರ್ತ ಶರತ್ ಅವರ ಪಾರ್ಥಿವ ಶರೀರವನ್ನು ಇಂದು ಎಜೆ ಆಸ್ಪತ್ರೆಯಿಂದ ಮೃತರ ಸ್ವಗ್ರಾಮಕ್ಕೆ ಮೆರವಣಿಗೆ ಮೂಲಕ ತೆಗೆದು ಕೊಂಡು ಹೋಗಲಾಗುತ್ತಿದೆ. ಬೆಳಗ್ಗೆ 10ಗಂಟೆಗೆ ಎಜೆ ಆಸ್ಪತ್ರೆಯಿಂದ ಶಾಂತಿಯುತವಾಗಿ ಹೊರಟ ಮೆರವಣಿಗೆಯ ಮೇಲೆ ಕೈಕಂಬ ಬಳಿ ಬರುತ್ತಿದ್ದಂತೆ ಅಕ್ಕಪಕ್ಕದ ಕಟ್ಟಡಗಳಲ್ಲಿ ಅವಿತಿದ್ದ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಬಾರಿ ಜನಸ್ತೋಮದ ನಡುವೆ ಶರತ್ ಮೃತ ದೇಹ ಬರುತ್ತಿತ್ತು, ಮೆರವಣಿಗೆಗೆ ಭದ್ರತೆ ನೀಡಲು 2000ಕ್ಕೂ ಮಿಕ್ಕಿ ಪೋಲೀಸರನ್ನು ನಿಯೋಜಿಸಲಾಗಿದೆ, ಆದರು ಮತಾಂಧ ಯುವಕರು ಕಲ್ಲುತೂರಿರೋದು ಪೋಲೀಸ್ ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ. ಕಲ್ಲುತೂರಾಟದಲ್ಲಿ ಹಲವರಿಗೆ ಗಾಯಗಳಾಗಿದ್ದು ಓರ್ವ ಗಂಭೀರ ಗಾಯಗೊಂಡಿರೋದಾಗಿ ತಿಳಿದುಬಂದಿದೆ.

ಹಲವಾರು ವಾಹನಗಳು ಜಖಂಗೊಂಡಿದ್ದು, ಕೆಲ ಅಂಗಡಿಗಳನ್ನೂ ಪುಡಿಗೈಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಲ್ಲುತೂರಾಟಗಾರ ನಡೆಸಿದ ಕೆಲವರನ್ನು ಬಂದಿಸಿದ್ದಾರೆ ಜೊತೆಗೆ ಕೆಲ ಹಿಂದೂ ಸಂಘಟನೆ ಕಾರ್ಯಕರ್ತರನ್ನೂ ಬಂಧಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ಪೋಲೀಸರು ಲಾಠಿಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ.ವಾಹನ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ.

ವಾರದ ಹಿಂದೆ ನಡೆದ ಎಸ್.ಡಿ.ಪಿ.ಐ ಮುಖಂಡ ಅಶ್ರಫ್ ಕಲಾಯಿ ಶವಯಾತ್ರೆಯ ಸಂದರ್ಭದಲ್ಲಿ ಕೂಡ ಮುಸ್ಲಿಂ ಯುವಕರ ಗುಂಪು ಹನುಮಾನ್ ಸ್ಟಿಕ್ಕರ್ ಅಂಟಿಸಿದ ಕಾರಣಕ್ಕೆ ಬೈಕ್ ಸವಾರನೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಿತ್ತು, ಕರಾವಳಿಯಲ್ಲಿ ಪದೇ ಪದೇ ಕೋಮು ಹಿಂಸಾಚಾರದ ಕೃತ್ಯಗಳನ್ನು ನಡೆಸಲು ಕೆಲ ಮತಾಂಧ ಪಡೆ ಹವಣಿಸುತ್ತಿದ್ದು ಪೋಲೀಸರು ಆದಷ್ಟು ಬೇಗ ಇದರ ಬಗ್ಗೆ ಕ್ರಮ ತೆಗೆದುಕೊಂಡು ಶಾಂತಿ ನೆಲೆಸುವಂತೆ ನೋಡಿಕೊಳ್ಳಲಿ ಎಂಬುದು ಜನತೆಯ ಆಶಯವಾಗಿದೆ.

No comments