ಶರತ್ ಪಾರ್ಥೀವ ಶರೀರದ ಯಾತ್ರೆ ದುಃಖತಪ್ತರಾದ ಜನ ಸಾಗರ
ಮಂಗಳೂರು ಜೂನ್ 9: ದುಷ್ಕರ್ಮಿಗಳ ಚೂರಿ ಇರಿತಕ್ಕೆ ಹಲ್ಲೆಗೊಳಗಾದ ಶರತ್ ಮಡಿವಾಳ (28) ಚಿಕಿತ್ಸೆ ಫಲಾಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದು ಇಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಅವರ ಪಾರ್ಥೀವ ಶರೀರದ ಮೆರವಣಿಗೆಯು ಮಂಗಳೂರಿನ ಎ.ಜೆ ಅಸ್ಫತ್ರೆಯಿಂದ ಹೊರಟಿತ್ತು. ಅವರ ಹಿಂದೆ ಅಸಂಖ್ಯಾತ ಹಿಂದೂಗಳು ಅತ್ಯಂತ ನೋವಿನಿಂದ , ದುಃಖಭರಿತರಾಗಿ ,ಮಡುಗಟ್ಟಿದ ಅಕ್ರೋಶದೊಂದಿಗೆ ಹೆಜ್ಜೆ ಹಾಕುತಿದ್ದಾರೆ.
ಇಂದು ಬೆಳಿಗ್ಗೆ ಶವಯಾತ್ರೆಯ ವಾಹನ ಸಿದ್ಧತೆಗೊಳಿಸಿದ ಕಾರ್ಯಕರ್ತರು.ಕೈಗೆ ಕಪ್ಪು ಪಟ್ಟಿ ಧರಿಸಿದ RSS ಕಾರ್ಯಕರ್ತರು ಆಸ್ಪತ್ರೆಯ ಬಳಿ ಜಮಾವಣೆಗೊಂಡರು.ಮೆರವಣಿಗೆಯಲ್ಲಿ ಭಾಗವಹಿಸಿ ವಾಹನಗಳಲ್ಲಿ ಕಪ್ಪು ದ್ವಜವನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಶವಯಾತ್ರೆಯ ಆ್ಯಂಬುಲೆನ್ಸ್ ಗೆ ಹೂವಿನಿಂದ ಅಲಂಕಾರಗೊಳಿಸಲಾಗಿತ್ತು.ಕಮಿಷನರೇಟ್ ವಲಯ ಹೊರತುಪಡಿಸಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿ ಇರುವುದರಿಂದ ಭದ್ರತೆಗಾಗಿ ಸುಮಾರು 2000 ಸಾವಿರ ಪೋಲೀಸರ ನಿಯೋಜನೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಶವಯಾತ್ರೆಯಲ್ಲಿ ಹಿಂದು ಮುಖಂಡರಾದ ಶರಣ್ ಪಂಪ್ವೆಲ್, ಅರುಣ್ ಕುಮಾರ್ ಪುತ್ತಿಲ, ಮುರಳಿ ಕೃಷ್ಣ ಹಸಂತಡ್ಕ, ರಾಜೇಶ್ ನೈಕ್ ಉಳಿಪಾಡಿಗುತ್ತು, ಹರೀಶ್ ಪೂಂಜಾ ಮತ್ತಿರರು ಬಾಗಿಯಾಗಿದ್ದು ಸಾವಿರಾರು ಮಂದಿ ಅವರೊಂದಿಗೆ ಶರತ್ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
No comments