Breaking News

ಕಣ್ಣು ದಾನ ಮಣ್ಣು ಪಾಲು ಮಾಡಿತೆ ಸರಕಾರ ?

ಸುದ್ದಿ24×7 ಬಂಟ್ವಾಳ: ಕಳೆದ ಮಂಗಳವಾರ ತಡ ರಾತ್ರಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮೇಲೆ ದುಷ್ಕರ್ಮಿಗಳ ತಂಡ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಶುಕ್ರವಾರ ಸಂಜೆ 7 ಗಂಟೆಗೆ ಚಿಕಿತ್ಸೆ ಫಲಕಾರಿ ಯಾಗದೆ ಸಾವನಪ್ಪಿದರು .

ಹಲ್ಲೆಯ ತೀವ್ರತೆಗೆ ಅವರ ಮೆದುಳು ಮತ್ತು ಕುತ್ತಿಗೆಯ ಭಾಗದಲ್ಲಿ ತೀವ್ರತರವಾದ ಗಾಯಗಳಾಗಿತ್ತು, ಇದರಿಂದ ಅಧಿಕ ರಕ್ತಸ್ರಾವವಾಗಿದ್ದು ತುರ್ತಾಗಿ ಬೇಕಾಗಿದ್ದ ರಕ್ತದ ಅವಶ್ಯಕತೆಯನ್ನು ಇದ್ದು ಶರತ್ ಕುಟುಂಬಕ್ಕೆ ತಿಳಿಸಿದಾಗ ಅವರ ಅಣ್ಣ ತಕ್ಷಣ ತನ್ನ ಸ್ನೇಹಿತರ ಮೊರೆ ಹೋದರು. ತಡ ರಾತ್ರಿಯಲ್ಲಿ ಸ್ನೇಹಿತರು ಕೂಡಲೆ ತಮ್ಮೆಲ್ಲ ಬಂದು ಬಳಗಕ್ಕೆ ಕರೆ ಮಾಡಿ ರಕ್ತ ಕೊಡುವಂತೆ ಕೇಳಿಕೊಂಡರು, ಅಲ್ಲದೆ ಅಧಿಕ ರಕ್ತದ ಅವಶ್ಯಕತೆ ಇದುದರಿಂದ ಅ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಯುವಕರ ದಂಡು ದೌಡಾಯಿಸಿದ್ದು ಶರತ್ ಅವರ ಚಿಕಿತ್ಸೆಗೆ ಬೇಕಾಗುವಷ್ಟು ರಕ್ತದ ಪೂರೈಕೆ ಮಾಡಿದ್ದರು, ಆದರೆ ಸಮಯಗಳು ಕಳೆದ ಹಾಗೆ ಶರತ್ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಲು ನಿರಾಕರಿಸುತ್ತಾ ಇತ್ತು. ನಿರಂತರ ಪ್ರಯತ್ನ ಕೈ ಬೀಡದ ವೈದ್ಯರು ಶರತ್ ಅವರನ್ನು ಬದುಕಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಾ ಇದ್ದರು .

ಒಂದೆಡೆ ಶರತ್ ಅವರ ದೇಹ ಚಿಂತನಾ ಜನಕ ಸ್ಥಿತಿ ತಲುಪುತ್ತಾ‌ ಇದಂತೆ ಈ ವಿಷಯವನ್ನು ವೈದ್ಯರು ಅವರ ಕುಟುಂಬದ ಸದಸ್ಯರ ಗಮನಕ್ಕೆ ತಂದರು . ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶರತ್ ತಂದೆಯ ದುಖಕ್ಕೆ ಅಲ್ಲಿ ಉತ್ತರವೆ ಇಲ್ಲ.ಆದರೆ ಆ ಸಂದರ್ಭದಲ್ಲಿ ಶರತ್ ಅವರ ತಂದೆಯಾಡಿದ ಮಾತು ಇಡಿಯ ಕರ್ನಾಟಕ ಹೆಮ್ಮೆಪಡುವಂತೆ ಮಾಡಿದೆ. ನನ್ನ ಮಗ ಈ ಸಮಾಜಕ್ಕೆ ಬೇಕಾದರೆ ಬದುಕಿ ಬರುತ್ತಾನೆ ಒಂದು ವೇಳೆ ಮೃತರಾದರೆ ಅವರ ಕಣ್ಣು ಈ ಸಮಾಜಕ್ಕೆ ದಾನ ಮಾಡುತ್ತೇನೆ ಎಂದಿದ್ದರು . ಆದರೆ ವಿಧಿಯಾಟ ನೋಡಿ ಶರತ್ ಅವರು ಗುರುವಾರ ಅಪರಾಹ್ನ ಇಹಲೋಕ ತ್ಯಜಿಸಿದರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶ ಇರುವ ಕಾರಣ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಾ ಇದ್ದು, ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಅವರ ಸಾವನ್ನು ಶುಕ್ರವಾರ ಸಂಜೆಯ ವರೆಗೆ ಘೋಷಿಸಬಾರದೆಂದು ಸರಕಾರದ ಕಡೆಯಿಂದ ಆಜ್ಞೆಯಾಗಿತ್ತು ಅನ್ನುವ ಆತಂಕಕಾರಿ ವಿಷಯ ಇದೀಗ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಈ ಸುದ್ದಿ ಇಡಿಯ ಕರಾವಳಿ ಕರ್ನಾಟಕವನ್ನು ಬೆಚ್ಚಿ ಬಿಳಿಸಿದ್ದೆ .

No comments