Breaking News

ಗೋ ಮಾಂಸ ಕೊಂಡೊಯ್ಯುತ್ತಿದ್ದ ಮುಸ್ಲಿಂ ವ್ಯಕ್ತಿಯೋರ್ವನಿಗೆ ಹಿಗ್ಗಾ ಮುಗ್ಗ ಥಳಿಸಿದರು



ಮುಂಬೈ :ಗೋ ಮಾಂಸ ಕೊಂಡೊಯ್ಯುತ್ತಿದ್ದ ಮುಸ್ಲಿಂ ವ್ಯಕ್ತಿಯೋರ್ವನಿಗೆ ಗೋ ರಕ್ಷಕರು ಮುಗಿ ಬಿದ್ದು ಹಿಗ್ಗಾ ಮುಗ್ಗ ಥಳಿಸಿದ ಘಟನೆ ಬುಧವಾರ ಮಧ್ಯಾಹ್ನ ಮಹಾರಾಷ್ಟ್ರದ ಜಲಾಲಖೇಡ ಪಟ್ಟಣದಲ್ಲಿ ನಡೆದಿದೆ .ಹಲ್ಲೆಗೊಳಗಾದ ವ್ಯಕ್ತಿಯನ್ನು   ಕಟೊಲ್ ನಿವಾಸಿ ಸಲೀಮ್ ಇಸ್ಮಾಯಿಲ್ ಷಾ (೩೬) ಎಂದು ಗುರುತಿಸಲಾಗಿದೆ .
 ಸಲೀಮ್ ಇಸ್ಮಾಯಿಲ್ ಷಾ ತಾನು ತಾಲೂಕ್ ಬಿಜೆಪಿ   ಅಲ್ಪಸಂಖ್ಯಾತ ಘಟಕದ  ಪ್ರಧಾನ ಕಾರ್ಯದರ್ಶಿ  ಎಂದು ಹೇಳಿಕೊಂಡಿದ್ದಾನೆ .
ವರದಿಗಳ ಪ್ರಕಾರ,ಹಲ್ಲೆಗೊಳಗಾದ ವ್ಯಕ್ತಿ ಅಮ್ನರ್ ಹಳ್ಳಿಯಿಂದ ಕಟೋಲ್ಗೆ ದ್ವಿಚಕ್ರ ವಾಹನವೊಂದರ ಮೂಲಕ ಮಾಂಸ ಖರೀದಿಸಿ ಪ್ರಯಾಣಿಸುತ್ತಿದ್ದ ವೇಳೆ ಗೋ ರಕ್ಷಕರ ಗುಂಪು ಒಂದು ಮುಗಿ ಬಿದ್ದು ಸಲೀಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಸಲೀಮ್ ನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದು .ಘಟನೆ ಸಂಬಂಧಿಸಿ ೪ ಜನರನ್ನು ನಾಗ್ಪುರ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ .

No comments