ಐಸಿಸ್ ಜೊತೆ ನಂಟು sdpi ಕಾರ್ಯಕರ್ತನ ಬಂಧನ
ಕೇರಳ ಮೂಲದ ಶಹಜಹಾನ್ ಬಂಧನ
ನವದೆಹಲಿ:ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಕಾನೂನು ಬಾಹಿರವಾಗಿ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕೇರಳದ ಕಣ್ಣೂರು ನಿವಾಸಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಶಹಜಹಾನ್ ವಲ್ಲುವ (32) ಬಂಧಿತ ಆರೋಪಿ .
ಅಮೇರಿಕಾದ ಗುಪ್ತಚರ ಇಲಾಖೆ ಸಿಐಎ ನೀಡಿದ ಮಾಹಿತಿ ಮೇರೆಗೆ ದೆಹಲಿ ವಿಶೇಷ ಪೊಲೀಸರು ಆರೋಪಿಯನ್ನು ಜೂನ್ 30 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಕಲಿ ಪಾಸ್‌ಪೋರ್ಟ್ ಮೂಲಕ ಈತ ಭಾರತ ಮತ್ತು ಸಿರಿಯಾದಲ್ಲಿ ಐಸಿಸ್ ಮುಖಂಡರ ಜತೆ ಸಂಪರ್ಕ ಸಾಧಿಸುತ್ತಿದ್ದ ಅದಲ್ಲದೆ ಈತನ ಮೊಬೈಲ್ ಅನ್ನು ಪರಿಶೀಲಿಸಿದಾಗ ಹಲವಾರು ಐಸಿಸ್ ಬೆಂಬಲಿಗರ ಮಾಹಿತಿ ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟರ್ಕಿಯಿಂದ ಇತ ಎರಡು ಬಾರಿ ಗಡಿಪಾರಿಗೂ ಒಳಗಾಗಿದ್ದ ಎಂದು ಹೇಳಲಾಗಿದೆ.
ಬಂಧಿತ ಆರೋಪಿ ಎಸ್‍ಡಿಪಿಐ ಕಾರ್ಯಕರ್ತ
ಶಹಜಹಾನ್ ವಲ್ಲುವ ಕೇರಳದ ಸ್ಥಳೀಯ ಚುನಾವಣೆಯಲ್ಲಿ ಎಸ್‍ಡಿಪಿಐ ಬೂತ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ಪತ್ರಿಕೆಯೊಂದರ ಅಕ್ಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದನು ಎಂದು ವರದಿ ಆಗಿದೆ.
No comments