ಹಿಂದೂ ಕುಟುಂಬ ಇಸ್ಲಾಂಗೆ ಮತಾಂತರ ?
ಉಡುಪಿ : ಕಾಪು ಸಮೀಪದ ಮಲ್ಲಾರ್-ಕೊಂಬುಗುಡ್ಡೆ ನಿವಾಸಿಗಳಾದ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಸದ್ದಿಲ್ಲದೆ ಹಿಂದೂ ಧರ್ಮ ತೊರೆದು ಇಸ್ಲಾಂಗೆ ಮತಾಂತರಗೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹರಿದಾಡಿದ ಸುದ್ದಿಯಿಂದಾಗಿ ಕಾಪು ಪರಿಸರದಲ್ಲಿ ಆತಂಕ ನೆಲೆಸಿದೆ. ಹಿಂದೂ ಸಂಘಟನೆಗಳು ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿವೆ. ಈ ಮಧ್ಯೆ ಮತಾಂತರಗೊಂಡಿವೆಯೆನ್ನಲಾದ ಕುಟುಂಬ ಬಾಡಿಗೆ ಮನೆ ತೊರೆದು ನಾಪತ್ತೆಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಘಟನೆಯ ವಿವರ:
ಕಾಪುವಿನ ಮಲ್ಲಾರ್ ಕೊಂಬುಗುಡ್ಡೆ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನ ಬಳಿಯ ಡೋರ್ ನಂಬ್ರ ೨-೫೨/೨ಎಫ್ ನಿವಾಸಿಗಳಾದ ಭಾಸ್ಕರ ಶೆಟ್ಟಿ, ರೇವತಿ ಶೆಟ್ಟಿ ದಂಪತಿ ತಮ್ಮ ಮಕ್ಕಳಾದ ಪ್ರತೀಕ್ ಹಾಗೂ ಪ್ರತೀಕ್ಷಾ ಜೊತೆ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ. ಭಾಸ್ಕರ ಶೆಟ್ಟಿ(೪೯) ಅಕ್ಬರ್ ಅಲಿ ಆಗಿ ಹೆಸರು ಬದಲಿಸಿಕೊಂಡಿದ್ದರೆ, ರೇವತಿ ಶೆಟ್ಟಿ(೪) ಆಯಿಷಾ ಆಗಿ ಹೆಸರು ಬದಲಿಸಿಕೊಂಡಿದ್ದಾರೆ. ಪ್ರತೀಕ್ ಶೆಟ್ಟಿ(೯) ಮುಹಮ್ಮದ್ ಹ್ಯಾರಿಸ್ ಆಗಿ ಬದಲಾಗಿದ್ದರೆ, ಪ್ರತೀಕ್ಷಾ(೧೭) ಆಶಿಕಾ ಬಾನು ಆಗಿ ಹೆಸರು ಬದಾಲಾಯಿಸಿಕೊಂಡಿದ್ದಾರೆ. ಮಂಗಳೂರಿನ ನೋಟರಿ ವಕೀಲರ ಮೂಲಕ ಹೆಸರು ಬದಲಿಸಿದ್ದು ಈ ಕುರಿತು ಪತ್ರಿಕೆಯೊಂದರಲ್ಲಿ ಜಾಹೀರಾತನ್ನೂ ನೀಡಿದ್ದಾರೆ. ಕಾಪು, ಕೊಂಬುಗುಡ್ಡೆ, ಉಳಿಯಾರಗೋಳಿ, ಮಲ್ಲಾರ್ ಪರಿಸರದಲ್ಲಿ ಈ ಹಿಂದೆಯೂ ಮತಾಂತರದ ಕೂಗು ಕೇಳಿಬರುತ್ತಿದ್ದು ಭಾಸ್ಕರ ಶೆಟ್ಟಿಯವರ ಪ್ರಕರಣದಿಂದಾಗಿ ಸಂಘಟನೆಗಳ ಆರೋಪಕ್ಕೆ ಸಾಕ್ಷ್ಯ ದೊರೆತಂತಾಗಿದೆ.
No comments